Publish Date: Sun, 20 Feb 2022 (09:50 IST)
Updated Date: Sun, 20 Feb 2022 (10:02 IST)
ಮುಂಬೈ: ಟೀಂ ಇಂಡಿಯಾ ಎಲ್ಲಾ ಮಾದರಿಯ ತಂಡಗಳಿಗೆ ನಾಯಕನಾಗಿ ಆಯ್ಕೆಯಾದ ರೋಹಿತ್ ಶರ್ಮಾಗೆ ಅಭಿನಂದನೆ ಸಲ್ಲಿಸುತ್ತಿರುವ ಅಭಿಮಾನಿಗಳು ಅವರ ಹಳೆಯ ಟ್ವೀಟ್ ನ್ನು ವೈರಲ್ ಮಾಡಿದ್ದಾರೆ.
ರೋಹಿತ್ ಹಿಂದೊಮ್ಮೆ ಅಭಿಮಾನಿಯೊಬ್ಬರು ನಿಮ್ಮ ಬಗ್ಗೆ ವಿವರಿಸಿ ಎಂದು ಕೇಳಿದ್ದಕ್ಕೆ ನನ್ನನ್ನು ತೋಳಗಳ ಕಡೆಗೆ ಎಸೆಯಿರಿ, ಅವುಗಳ ಹಿಂಡನ್ನೇ ಮುನ್ನಡೆಸಿಕೊಂಡು ಬರುವೆ ಎಂದಿದ್ದರು.
ಅವರ ಈ ಟ್ವೀಟ್ ಈಗ ವೈರಲ್ ಆಗುತ್ತಿದೆ. ನಿನ್ನೆಯಷ್ಟೇ ಲಂಕಾ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಕಟಿಸಿರುವ ಬಿಸಿಸಿಐ ಆಯ್ಕೆ ಸಮಿತಿ ರೋಹಿತ್ ಶರ್ಮಾರನ್ನು ಟೆಸ್ಟ್ ತಂಡಕ್ಕೂ ನಾಯಕನಾಗಿ ನೇಮಕ ಮಾಡಿದೆ.