ಮುಂಬೈ: ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಟಿ20 ಸರಣಿಗೆ ಟೀಂ ಇಂಡಿಯಾ ಘೋಷಿಸಲಾಗಿದ್ದು ಈ ತಂಡದಲ್ಲಿ ಹಿರಿಯರಾದ ರೋಹಿತ್ ಶರ್ಮಾ, ಕೊಹ್ಲಿ ಮತ್ತೆ ಸ್ಥಾನ ಪಡೆದಿದ್ದಾರೆ.
ಕೊಹ್ಲಿ, ರೋಹಿತ್ ಆಗಮನದಿಂದ ತಂಡದಲ್ಲಿ ಖಾಯಂ ಸ್ಥಾನ ಪಡೆಯುವ ನಿಟ್ಟಿನಲ್ಲಿ ಶ್ರಮವಹಿಸುತ್ತಿದ್ದ ಯುವ ಕ್ರಿಕೆಟಿಗರ ಸ್ಥಾನಕ್ಕೆ ಕುತ್ತು ಬಂದಿದೆ. ಅದರಲ್ಲೂ ವಿಶೇಷವಾಗಿ ರಿಂಕು ಸಿಂಗ್ ಗೆ ಭಾರೀ ನಷ್ಟವಾಗಿದೆ.
ಕಳೆದ ಆಸ್ಟ್ರೇಲಿಯಾ ಮತ್ತು ದ.ಆಫ್ರಿಕಾ ವಿರುದ್ಧದ ಟಿ20 ಸರಣಿಗಳಲ್ಲಿ ರಿಂಕು ಸಿಂಗ್ ಫಿನಿಶರ್ ಆಗಿ ಅದ್ಭುತ ರನ್ ಗಳಿಸಿದ್ದರು. ಆದರೆ ಈಗ ಕೊಹ್ಲಿ, ರೋಹಿತ್ ತಂಡಕ್ಕೆ ಸೇರ್ಪಡೆಯಾದರೆ ರಿಂಕು ಸಿಂಗ್ ಗೆ ಪ್ಲೇಯಿಂಗ್ ಇಲೆವೆನ್ ನಲ್ಲಿ ಸ್ಥಾನ ಸಿಗುವುದು ಕಷ್ಟ.
ಹೀಗಾದಲ್ಲಿ ಯುವ ಕ್ರಿಕೆಟಿಗ ಐಪಿಎಲ್ ನಲ್ಲಿ ತನ್ನ ಸಾಮರ್ಥ್ಯ ಪ್ರದರ್ಶಿಸಿ ಟಿ20 ವಿಶ್ವಕಪ್ ನಲ್ಲಿ ತಂಡಕ್ಕೆ ಆಯ್ಕೆಯಾಗಲು ತಾನು ಸಮರ್ಥ ಎಂದು ಸಾಬೀತುಪಡಿಸಬೇಕಾಗುತ್ತದೆ. ಕೇವಲ ರಿಂಕು ಸಿಂಗ್ ಮಾತ್ರವಲ್ಲ, ತಿಲಕ್ ವರ್ಮ ಸ್ಥಾನಕ್ಕೂ ಕುತ್ತು ಬರಲಿದೆ. ರೋಹಿತ್, ಕೊಹ್ಲಿ ತಂಡಕ್ಕೆ ಮರಳಿದ್ದಾರೆ ಎಂಬ ಖುಷಿ ಒಂದೆಡೆಯಾದರೆ ಈ ಯುವ ಪ್ರತಿಭಾವಂತ ಕ್ರಿಕೆಟಿಗರ ಸ್ಥಾನಕ್ಕೆ ಕುತ್ತು ಬಂದಿದೆ ಬಂದ ಬೇಸರವೂ ಅಭಿಮಾನಿಗಳನ್ನು ಕಾಡಲಿದೆ.