ಮುಂಬೈ: ಈ ಬಾರಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಗೆಲ್ಲುವ ಭರವಸೆಯಿದೆ. ಅದಕ್ಕಾಗಿ ಎದಿರು ನೋಡುತ್ತಿದ್ದೇನೆ ಎಂದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
2011 ರಲ್ಲಿ ಏಕದಿನ ವಿಶ್ವಕಪ್ ಭಾರತದಲ್ಲಿ ನಡೆದಿತ್ತು. ಆ ವಿಶ್ವಕಪ್ ನನ್ನು ಭಾರತ ಧೋನಿ ನೇತೃತ್ವದಲ್ಲಿ ಆಡಿ ಚಾಂಪಿಯನ್ ಪಟ್ಟಕ್ಕೇರಿತ್ತು. ಅದಾದ ಬಳಿಕ ಮತ್ತೆ ಭಾರತದಲ್ಲಿ ವಿಶ್ವಕಪ್ ನಡೆಯುತ್ತಿದೆ.
2011 ರ ವಿಶ್ವಕಪ್ ನಲ್ಲಿ ನಾನು ತಂಡದ ಭಾಗವಾಗಿರಲಿಲ್ಲ. ಮನೆಯಲ್ಲಿ ಕೂತು ಪಂದ್ಯ ನೋಡುತ್ತಿದ್ದೆ. ಆದರೆ ಆ ವಿಶ್ವಕಪ್ ನ ಸಾಕಷ್ಟು ಸುಂದರ ನೆನಪುಗಳಿವೆ. ಭಾರತದಲ್ಲಿ ನಡೆಯುವಾಗ ನಮ್ಮ ಜನರ ಬೆಂಬಲ ಅಭೂತಪೂರ್ವವಾಗಿರುತ್ತದೆ. ಈ ಬಾರಿ ಮತ್ತೆ ನಮಗೆ ಕಪ್ ಗೆಲ್ಲಲು ಸಾಧ್ಯವಾಗುತ್ತದೆ ಎಂದುಕೊಂಡಿದ್ದೇನೆ. ಅದಕ್ಕಾಗಿ ಎದಿರು ನೋಡುತ್ತಿದ್ದೇನೆ ಎಂದಿದ್ದಾರೆ.