Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮನೆಯಲ್ಲಿ ಹೆಂಡತಿ ಹೇಳಿದ್ದೇ ನಡೆಯಬೇಕು: ಕಷ್ಟ ಹೇಳಿಕೊಂಡ ರೋಹಿತ್ ಶರ್ಮಾ

Rohit Sharma family

Krishnaveni K

ಮುಂಬೈ , ಸೋಮವಾರ, 8 ಏಪ್ರಿಲ್ 2024 (16:44 IST)
ಮುಂಬೈ: ಟೀಂ ಇಂಡಿಯಾ ನಾಯಕ, ವಿಶ್ವದ ಘಟಾನುಘಟಿ ಆಟಗಾರರನ್ನು ಹ್ಯಾಂಡಲ್ ಮಾಡುವ ರೋಹಿತ್ ಶರ್ಮಾ ತಮ್ಮ ಮನೆಯಲ್ಲಿ ಪತ್ನಿಯೇ ಕ್ಯಾಪ್ಟನ್ ಎಂದು ಹೇಳಿಕೊಂಡಿದ್ದಾರೆ.

ಕಪಿಲ್ ಶರ್ಮಾ ಶೋನಲ್ಲಿ ಭಾಗಿಯಾದ ರೋಹಿತ್ ಅನೇಕ ವೈಯಕ್ತಿಕ ಮತ್ತು ವೃತ್ತಿ ಜೀವನದ ತಮಾಷೆಗಳನ್ನು ಹಂಚಿಕೊಂಡಿದ್ದಾರೆ. ಈ  ವೇಳೆ ಶೋನಲ್ಲಿ ಅವರ ಪತ್ನಿ ರಿತಿಕಾ ಕೂಡಾ ಪ್ರೇಕ್ಷಕರಾಗಿ ಭಾಗಿಯಾಗಿದ್ದರು. ಕಪಿಲ್ ಶೋನಲ್ಲಿ ಇಬ್ಬರಿಗೂ ಅನೇಕ ಸ್ವಾರಸ್ಯಕರ ಪ್ರಶ್ನೆ ಕೇಳಲಾಯಿತು.

ಒಂದು ಹಂತದಲ್ಲಿ ರೋಹಿತ್ ಬಳಿ ನಿರೂಪಕ ಕಪಿಲ್ ‘ನಿಮಗೆ ಪಂದ್ಯದ ವೇಳೆ ಯಾರಾದರೂ ಬೌಲರ್ ಗಳು ನನ್ನ ಬಾಲ್ ಗೆ ಸಿಕ್ಸ್ ಹೊಡೀಬೇಡಿ, ಈವತ್ತು ನನ್ನ ಗರ್ಲ್ ಫ್ರೆಂಡ್ ಗ್ಯಾಲರಿಯಲ್ಲಿದ್ದಾಳೆ ಎಂದು ಮನವಿ ಮಾಡಿದ್ದು ಇದೆಯಾ?’ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ರೋಹಿತ್ ‘ಹೀಗೆ ಅನೇಕ ಬಾರಿ ಬೌಲರ್ ಗಳು ಮನವಿ ಮಾಡಿದ್ದು ಇದೆ. ಆದರೆ ನಾನು ಆಡುವಾಗ ನನ್ನ ಪತ್ನಿ ಯಾವತ್ತೂ ಮೈದಾನದಲ್ಲಿ ಫಿಂಗರ್ ಕ್ರಾಸ್ ಮಾಡಿ ಕೂತಿರ್ತಾಳೆ. ನಾನು ಸಿಕ್ಸ್ ಹೊಡೆಯದೇ ಇದ್ದರೆ ನನ್ನ ಹೆಂಡತಿ ನನ್ನನ್ನು ಪ್ರಶ್ನೆ ಮಾಡುತ್ತಾಳೆ. ನನಗೆ ಅವಳೇ ಮುಖ್ಯ ಎನ್ನುತ್ತೇನೆ’ ಎಂದು ನಗೆಗಡಲಲ್ಲಿ ತೇಲಿಸಿದ್ದಾರೆ.

ಇನ್ನು ರೋಹಿತ್ ರನ್ನು ಗಂಡನಾಗಿ ಅಥವಾ ಕ್ರಿಕೆಟಿಗನಾಗಿ ನಿಭಾಯಿಸಲು ಕಷ್ಟವೇ ಎಂದು ರಿತಿಕಾಗೆ ಕೇಳಲಾಯಿತು. ಈ ವೇಳೆ ಕ್ರಿಕೆಟ್ ಕ್ಯಾಪ್ಟನ್ ಆಗಿ ಅವರಿಗೆ ಅವರದ್ದೇ ತಂಡ, ಆಟಗಾರರಿದ್ದಾರೆ. ಅವರನ್ನು ನಿಭಾಯಿಸಬೇಕಾಗುತ್ತದೆ. ಆದರೆ ಗಂಡನಾಗಿ ಅವರನ್ನು ನಿಭಾಯಿಸುವುದು ಕಷ್ಟ ಎಂದಿದ್ದಾರೆ.

ಇದನ್ನು ಕೇಳಿ ರೋಹಿತ್ ‘ಕ್ರಿಕೆಟ್ ಮೈದಾನಕ್ಕೆ ಅವಳಿಗೆ ಎಂಟ್ರಿ ಕೊಡಲು ಸಾಧ್ಯವಿಲ್ಲ ಅಲ್ವಾ? ಆದರೆ ನಾನು ಮನೆಗೆ ಹೋಗಲೇಬೇಕು. ಮನೆಯಲ್ಲಿ ಅವಳೇ ಕ್ಯಾಪ್ಟನ್. ಅವಳು ಹೇಳಿದ್ದೇ ನಡೆಯಬೇಕು’ ಎಂದು ತಮಾಷೆಯಾಗಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನೀನೂ ನನ್ನ ತಮಾಷೆ ಮಾಡ್ತೀಯಾ? ಕೆಎಲ್ ರಾಹುಲ್ ಹುಸಿಮುನಿಸು