Publish Date: Thu, 03 Sep 2026 (10:03 IST)
Updated Date: Thu, 03 Sep 2026 (10:06 IST)
ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಇಂದು (ಸೆಪ್ಟೆಂಬರ್ 3) ಮುಂಬೈನಲ್ಲಿ ಹೈ-ವೋಲ್ಟೇಜ್ ಪರಿಶೀಲನಾ ಸಭೆಯನ್ನು ಆಯೋಜಿಸಿದ್ದು, ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಅವರ ಏಕದಿನ ಭವಿಷ್ಯ ಹಾಗೂ 2027ರ ಏಕದಿನ ವಿಶ್ವಕಪ್ನ ರೋಡ್ಮ್ಯಾಪ್ ಕುರಿತು ಮಹತ್ವದ ಚರ್ಚೆಗಳು ನಡೆಯುತ್ತಿವೆ.
ಶುಭಮನ್ ಗಿಲ್ ಈಗಾಗಲೇ ಭಾರತ ಏಕದಿನ ತಂಡದ ನಾಯಕತ್ವ ವಹಿಸಿಕೊಂಡಿದ್ದರೂ, ರೋಹಿತ್ ಶರ್ಮಾ ಅವರಂತಹ ದಿಗ್ಗಜ ಆಟಗಾರನನ್ನು ಮುಂದಿನ ವಿಶ್ವಕಪ್ವರೆಗೂ ಆಟಗಾರನಾಗಿ ತಂಡದಲ್ಲಿ ಮುಂದುವರಿಸಬೇಕೇ ಅಥವಾ ಸರಣಿಯಿಂದ ಸರಣಿಗೆ ಅವರ ಪ್ರದರ್ಶನ ಮೌಲ್ಯಮಾಪನ ಮಾಡಬೇಕೇ ಎಂಬ ಬಗ್ಗೆ ಆಯ್ಕೆ ಮಂಡಳಿ ಹಾಗೂ ಬಿಸಿಸಿಐ ಮಧ್ಯೆ ಭಿನ್ನಾಭಿಪ್ರಾಯಗಳು ಮೂಡಿದ್ದವು.
2027ರ ವಿಶ್ವಕಪ್ ಯೋಜನೆ: 2027ರ ಏಕದಿನ ವಿಶ್ವಕಪ್ ವೇಳೆಗೆ ರೋಹಿತ್ ಶರ್ಮಾ ಅವರಿಗೆ 40 ವರ್ಷ ವಯಸ್ಸಾಗುವುದರಿಂದ, ತಂಡದ ಭವಿಷ್ಯದ ದೃಷ್ಟಿಯಿಂದ ಯುವ ಆಟಗಾರರಿಗೆ ಆದ್ಯತೆ ನೀಡುವ ಸವಾಲು ಬಿಸಿಸಿಐ ಹಾಗೂ ಮುಖ್ಯ ಕೋಚ್ ಗೌತಮ್ ಗಂಭೀರ್ ಮುಂದಿದೆ.
ದಿಗ್ಗಜರ ಭವಿಷ್ಯದ ಮೇಲಿನ ಚರ್ಚೆ: ರೋಹಿತ್ ಶರ್ಮಾ ಜೊತೆಗೆ ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಅವರ ಏಕದಿನ ವೃತ್ತಿಜೀವನದ ಭವಿಷ್ಯದ ಮೇಲೆಯೂ ಈ ಸಭೆಯಲ್ಲಿ ವಿಸ್ತೃತ ಸಮಾಲೋಚನೆ ನಡೆಯಲಿದೆ.
ಸಭೆಯಲ್ಲಿ ಪ್ರಮುಖರ ಭಾಗಿ: ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಮುಖ್ಯ ಕೋಚ್ ಗೌತಮ್ ಗಂಭೀರ್, ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್, ಶ್ರೇಷ್ಠತಾ ಕೇಂದ್ರದ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಹಾಗೂ ನಾಯಕ ಶುಭಮನ್ ಗಿಲ್ ಈ ಸಭೆಯಲ್ಲಿ ಭಾಗವಹಿಸಿದ್ದಾರೆ.
ಶುಭಮನ್ ಗಿಲ್ ನಾಯಕತ್ವ ವಹಿಸಿಕೊಂಡಿದ್ದರೂ ರೋಹಿತ್ ಮತ್ತು ಕೊಹ್ಲಿ ಅವರ ಅನುಭವ 2027ರ ವಿಶ್ವಕಪ್ಗೆ ಅಗತ್ಯವಿದೆ ಎಂದು ಈ ಹಿಂದೆ ತಿಳಿಸಿದ್ದರು. ಆದರೆ, ಬಿಸಿಸಿಐ ಇಂದಿನ ಸಭೆಯಲ್ಲಿ ಯಾವ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದರ ಮೇಲೆ ಪ್ರಪಂಚದಾದ್ಯಂತದ ಕ್ರಿಕೆಟ್ ಅಭಿಮಾನಿಗಳ ಕಣ್ಣಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ