ಮುಂಬೈ: ಮುಂಬರುವ ಟಿ20 ವಿಶ್ವಕಪ್ ತಂಡದಿಂದ ವಿರಾಟ್ ಕೊಹ್ಲಿಯನ್ನು ಹೊರಗಿಡಲಾಗುತ್ತದೆ ಎಂಬ ಸೂಚನೆ ಬೆನ್ನಲ್ಲೇ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಆಯ್ಕೆಗಾರರಿಗೆ ಖಡಕ್ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಮೊನ್ನೆಯಷ್ಟೇ ಕೊಹ್ಲಿಯನ್ನು ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಲು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಗೆ ಮನಸ್ಸಿಲ್ಲ ಎಂದು ವರದಿಯಾಗಿತ್ತು. ವಿಶ್ವಕಪ್ ನಡೆಯುವ ಪಿಚ್ ಗಳು ನಿಧಾನಗತಿಯದ್ದಾಗಿರುವುದರಿಂದ ಕೊಹ್ಲಿಗೆ ಇದು ಸೂಟ್ ಆಗಲ್ಲ ಎಂದು ಅವರನ್ನು ಹೊರಗಿಡಲು ಆಯ್ಕೆ ಸಮಿತಿ ತಯಾರಿ ನಡೆಸಿತ್ತು.
ಆದರೆ ರೋಹಿತ್ ಶರ್ಮಾ ಏನು ಮಾಡ್ತಿರೋ ಗೊತ್ತಿಲ್ಲ. ಟಿ20 ವಿಶ್ವಕಪ್ ತಂಡದಲ್ಲಿ ವಿರಾಟ್ ಕೊಹ್ಲಿ ಇರಲೇಬೇಕು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾಗೇ ಖಡಕ್ ಸಂದೇಶ ಕೊಟ್ಟಿದ್ದಾರೆ ಎನ್ನಲಾಗಿದೆ. ಕೊಹ್ಲಿಯನ್ನು ಹೊರಗಿಡಲು ಅವರ ಮನವೊಲಿಸಲು ರೋಹಿತ್ ಶರ್ಮಾಗೇ ಸೂಚಿಸಲಾಗಿತ್ತು. ಆದರೆ ರೋಹಿತ್ ಇದನ್ನು ತಿರಸ್ಕರಿಸಿದ್ದು, ಕೊಹ್ಲಿ ತಂಡದಲ್ಲಿ ಇರಲೇಬೇಕು ಎಂದು ಹೇಳಿದ್ದಾರೆ ಎಂದು ಟೀಂ ಇಂಡಿಯಾ ಮಾಜಿ ಆಟಗಾರ ಕೀರ್ತಿ ಆಝಾದ್ ಹೇಳಿದ್ದಾರೆ.
ವಿರಾಟ್ ಕೊಹ್ಲಿಯನ್ನು ಟಿ20 ವಿಶ್ವಕಪ್ ತಂಡದಿಂದ ಹೊರಗಿಡಲಾಗುತ್ತದೆ ಎಂಬ ಸುದ್ದಿ ಕೇಳಿ ಅವರ ಫ್ಯಾನ್ಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಕಳೆದ ಏಕದಿನ ವಿಶ್ವಕಪ್ ನಲ್ಲೂ ಕೊಹ್ಲಿ ನಾಯಕ ರೋಹಿತ್ ಶರ್ಮಾಗೆ ಬಲಗೈ ಬಂಟನಂತಿದ್ದರು. ಕೊಹ್ಲಿಯಿದ್ದರೆ ತಂಡಕ್ಕೆ ಬಲ ಎಂದು ಎದುರಾಳಿಗಳಿಗೂ ಗೊತ್ತಿದೆ.