Webdunia - Bharat's app for daily news and videos

Install App

ಅಂದು ಯಶಸ್ವಿ ಜೈಸ್ವಾಲ್ ಗೆ ಮಾಡಿದ್ದನ್ನೇ ಜಸ್ಪ್ರೀತ್ ಬುಮ್ರಾಗೆ ಮಾಡುತ್ತಿದ್ದಾರೆ ರೋಹಿತ್ ಶರ್ಮಾ

Krishnaveni K
ಮಂಗಳವಾರ, 11 ಜೂನ್ 2024 (13:48 IST)
ನ್ಯೂಯಾರ್ಕ್: ಟಿ20 ವಿಶ್ವಕಪ್ ನ ಆರಂಭಿಕ ಎರಡು ಪಂದ್ಯಗಳಲ್ಲಿ ಭಾರತ ಜಯಭೇರಿ ಭಾರಿಸಲು ಕಾರಣವಾಗಿದ್ದು ವೇಗಿ ಜಸ್ಪ್ರೀತ್ ಬುಮ್ರಾ. ಎರಡೂ ಪಂದ್ಯಗಳಲ್ಲೂ ಅದ್ಭುತ ಬೌಲಿಂಗ್ ಮಾಡಿ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.

ಆದರೆ ಪಂದ್ಯದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ ಬುಮ್ರಾ ಅದ್ಭುತವಾಗಿ ಬೌಲಿಂಗ್ ಮಾಡಿದರು ಎಂದಷ್ಟೇ ಹೇಳಿದರು. ಉಳಿದಂತೆ ಬುಮ್ರಾ ಬಗ್ಗೆ ಹೆಚ್ಚು ಮಾತನಾಡಲು ಇಷ್ಟಪಡಲ್ಲ ಎಂದಿದ್ದಾರೆ. ಆ ಮೂಲಕ ಈ ಹಿಂದೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ವೇಳೆ ಯಶಸ್ವಿ ಜೈಸ್ವಾಲ್ ಗೆ ಮಾಡಿದ್ದನ್ನೇ ಈಗ ಬುಮ್ರಾಗೂ ಮಾಡುತ್ತಿದ್ದಾರೆ.

ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ವೇಳೆ ಯಶಸ್ವಿ ಜೈಸ್ವಾಲ್ ಸತತ ದ್ವಿಶತಕ ಸಿಡಿಸಿ ಅದ್ಭುತ ಫಾರ್ಮ್ ನಲ್ಲಿದ್ದರು. ಆದರೆ ರೋಹಿತ್ ಅವರನ್ನು ಒಮ್ಮೆಯೂ ಮನಸ್ಪೂರ್ತಿಯಾಗಿ ಹೊಗಳಲಿಲ್ಲ. ಇದಕ್ಕೆ ಕಾರಣವನ್ನು ಕೇಳಿದಾಗ ಈಗಲೇ ಹೊಗಳಿದರೆ ಅವರಿಗೆ ಯಶಸ್ಸು ತಲೆಗೆ ಹತ್ತಬಹುದು. ಇದರಿಂದ ಅವರ ಪ್ರದರ್ಶನದ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಅವರು ಇದೇ ಆಟ ಮುಂದುವರಿಸಲಿ ಎಂದಿದ್ದರು. ಕೊನೆಗೆ ಸರಣಿ ಮುಕ್ತಾಯದ ಬಳಿಕ ಜೈಸ್ವಾಲ್ ರನ್ನು ಕೊಂಡಾಡಿದ್ದರು.

ಇದೀಗ ಬುಮ್ರಾ ಜೊತೆಗೂ ರೋಹಿತ್ ಅದೇ ರೀತಿ ನಡೆಸುಕೊಂಡಿದ್ದಾರೆ. ಬುಬ್ರಾ ಬಗ್ಗೆ ನಾನು ಈಗಲೇ ಹೆಚ್ಚೇನೂ ಹೇಳಲ್ಲ. ಅವರು ಅದ್ಭುತ ಬೌಲರ್. ಆದರೆ ಅವರು ಇದೇ ಲಹರಿಯಲ್ಲಿ ಕೊನೆಯವರೆಗೂ ಇರಲಿ. ಹೀಗಾಗಿ ಈಗಲೇ ಏನೂ ಮಾತನಾಡಲ್ಲ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments