Publish Date: Sun, 24 Mar 2019 (09:08 IST)
Updated Date: Sun, 24 Mar 2019 (09:10 IST)
ನವದೆಹಲಿ: ಟೀಂ ಇಂಡಿಯಾದ ಯುವ ಸೆನ್ಸೇಷನಲ್ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಆಸ್ಟ್ರೇಲಿಯನ್ನರನ್ನೇ ಸ್ಲೆಡ್ಜ್ ಮಾಡಿ ಬಂದ ಎನರ್ಜಿಟಿಕ್ ಹೀರೋ. ಆದರೆ ಅವರಿಗೆ ಕ್ಯಾಪ್ಟನ್ ಕೊಹ್ಲಿ ಎಂದರೆ ಭಯವಂತೆ!
ಕಾರಣ ವಿರಾಟ್ ಕೊಹ್ಲಿಯ ಕೋಪ. ತಪ್ಪು ಮಾಡಿದಾಗ ವಿರಾಟ್ ಕೊಹ್ಲಿ ಮೈದಾನದಲ್ಲೇ ಹಿಂದೆ ಮುಂದೆ ನೋಡದೇ ಆಟಗಾರರ ಮೇಲೆ ಕೆಂಡ ಕಾರುತ್ತಾರೆ. ಹೀಗಾಗಿ ಯಾರಿಗೂ ಭಯಪಡದ ನನಗೆ ವಿರಾಟ್ ಭಯ್ಯಾ ಎಂದರೆ ಭಯ ಎಂದಿದ್ದಾರೆ ರಿಷಬ್ ಪಂತ್.
‘ನನಗೆ ಬೇರೆ ಯಾರ ಮೇಲೂ ಭಯವಿಲ್ಲ. ಆದರೆ ವಿರಾಟ್ ಭಯ್ಯಾ ಕೋಪದಲ್ಲಿದ್ದಾಗ ಭಯವಾಗುತ್ತೆ. ಆದರೆ ನಾವು ತಪ್ಪು ಮಾಡಿದಾಗ ಮಾತ್ರ ಭಯಪಡಬೇಕು. ಹೀಗೆ ಇನ್ನೊಬ್ಬರು ನಮ್ಮ ಮೇಲೆ ಕೋಪಗೊಂಡಾಗಲೇ ನಮಗೆ ತಪ್ಪುಗಳನ್ನು ತಿದ್ದಿಕೊಳ್ಳಲು ಸಾಧ್ಯವಾಗುವುದು’ ಎಂದು ರಿಷಬ್ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ