ಮುಂಬೈ: ಇತ್ತೀಚೆಗೆ ಟೀಂ ಇಂಡಿಯಾದಲ್ಲಿ ಯುವ ಸೆನ್ಸೇಷನಲ್ ಕ್ರಿಕೆಟರ್ ಆಗಿರುವ ರಿಂಕು ಸಿಂಗ್ ಈಗ ತಮ್ಮ ವೈಯಕ್ತಿಕ ಜೀವನದಲ್ಲಿ ಮಹತ್ವದ ಹೆಜ್ಜೆಯೊಂದನ್ನು ಇಡುತ್ತಿದ್ದಾರೆ.
ಫಿನಿಶಿಂಗ್ ಶೈಲಿಯ ಮೂಲಕವೇ ಭಾರತ ಟಿ20 ತಂಡದಲ್ಲಿ ಸ್ಥಾನ ಖಾಯಂ ಮಾಡಿಕೊಂಡಿರುವ ರಿಂಕು ಸಿಂಗ್ ಬಡತನದಲ್ಲಿ ಅರಳಿದ ಪ್ರತಿಭೆ. ಬಡ ಕುಟುಂಬದಿಂದ ಬಂದ ರಿಂಕು ಸಿಂಗ್ ಇಂದು ಟೀಂ ಇಂಡಿಯಾದಲ್ಲಿ ಮಿಂಚುತ್ತಿದ್ದಾರೆ.
ಆದರೆ ಅವರು ತಮ್ಮ ಬಂದ ಹಾದಿಯನ್ನು ಮರೆತಿಲ್ಲ. ಇದೀಗ ರಿಂಕು ತಮ್ಮಂತೇ ಕಷ್ಟದಲ್ಲಿರುವ, ಬಡತನದಿಂದಾಗಿ ಕ್ರಿಕೆಟ್ ಗೆ ಬೇಕಾದ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಾಗದ ಪ್ರತಿಭೆಗಳ ನೆರವಿಗೆ ಮುಂದೆ ಬಂದಿದ್ದಾರೆ.
ತಮ್ಮ ಊರು ಆಲಿಘಡ್ ನಲ್ಲಿ ಬಡ ಕ್ರಿಕೆಟ್ ಆಟಗಾರರಿಗೆ ಉಪಯೋಗವಾಗುವಂತೆ 50 ಲಕ್ಷ ರೂ. ವೆಚ್ಚದಲ್ಲಿ ಹಾಸ್ಟೆಲ್ ನಿರ್ಮಾಣ ಮಾಡುತ್ತಿದ್ದಾರೆ. ಅದೀಗ ನಿರ್ಮಾಣ ಹಂತದಲ್ಲಿದ್ದು, ಮುಂದಿನ ವರ್ಷ ಲೋಕಾರ್ಪಣೆಯಾಗಲಿದೆ. ಕಳೆದ ಐಪಿಎಲ್ ವೇಳೆ ರಿಂಕು ಸಿಂಗ್ ತಮ್ಮ ಕನಸಿನ ಯೋಜನೆ ಬಗ್ಗೆ ಹೇಳಿಕೊಂಡಿದ್ದರು. ಅದೀಗ ಮುಕ್ತಾಯ ಹಂತದಲ್ಲಿದೆ.