Publish Date: Mon, 14 May 2018 (09:52 IST)
Updated Date: Mon, 14 May 2018 (09:54 IST)
ಇಂಧೋರ್: ಐಪಿಎಲ್ ನ ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಕನ್ನಡಿಗರೇ ತುಂಬಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸವಾಲೊಡ್ಡಲಿದೆ.
ಕೆಎಲ್ ರಾಹುಲ್, ಕರುಣ್ ನಾಯರ್ ನಂತಹ ಕನ್ನಡಿಗ ಆಟಗಾರರೇ ಆಧಾರ ಸ್ತಂಬವಾಗಿರುವ ಪಂಜಾಬ್ ತಂಡಕ್ಕೆ ವಿರಾಟ್ ಕೊಹ್ಲಿ ನೇತೃತ್ವದ ಆರ್ ಸಿಬಿ ನಿರ್ಣಾಯಕ ಪಂದ್ಯವಾಡಲಿದೆ.
ಈ ಪಂದ್ಯ ಗೆದ್ದರಷ್ಟೇ ಕೊಹ್ಲಿ ಪಡೆಯ ಪ್ಲೇ ಆಫ್ ಕನಸು ಜೀವಂತವಾಗಿರಲಿದೆ. ಅತ್ತ ಪಂಜಾಬ್ ಗೂ ಇದೇ ಸ್ಥಿತಿ. ಕಳೆದೆರಡು ಪಂದ್ಯಗಳನ್ನು ಸೋತಿರುವ ರವಿಚಂದ್ರನ್ ಅಶ್ವಿನ್ ನೇತೃತ್ವದ ತಂಡ ಇಂದು ಗೆಲ್ಲಲೇಬೇಕಾಗಿದೆ.
ಆದರೆ ಕ್ರಿಸ್ ಗೇಲ್, ಏರಾನ್ ಪಿಂಚ್ ಸೇರಿದಂತೆ ಪ್ರಮುಖ ಬ್ಯಾಟ್ಸ್ ಮನ್ ಗಳು ಕೈ ಕೊಡುತ್ತಿರುವುದು ಅದರ ಚಿಂತೆಗೆ ಕಾರಣವಾಗಿದೆ. ಇತ್ತ ಆರ್ ಸಿಬಿಯದ್ದೂ ಅದೇ ಸ್ಥಿತಿ. ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್ ಬಿಟ್ಟರೆ ಇದುವರೆಗೆ ಯಾರೂ ಮಿಂಚಿಲ್ಲ. ಹೀಗಾಗಿ ಕೊಹ್ಲಿ ಪಡೆ ಕೇವಲ 4 ಜಯದೊಂದಿಗೆ 7 ನೇ ಸ್ಥಾನದಲ್ಲಿಯೇ ಇದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.