Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮುಂಬೈ: ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ಕಿತ್ತೊಗೆದ ಬಳಿಕ ನಡೆದ ವಿವಾದದ ಬಗ್ಗೆ ಮಾಜಿ ಕೋಚ್ ರವಿಶಾಸ್ತ್ರಿ ತಮ್ಮ ಅಭಿಪ್ರಾಯ ಹೇಳಿದ್ದಾರೆ.
ಟಿ20 ನಾಯಕತ್ವದಿಂದ ಕೆಳಗಿಳಿಯುತ್ತೇನೆ ಎಂದಾಗ ನಾವು ಬೇಡ ಎಂದು ಕೊಹ್ಲಿ ಮನವಿ ಮಾಡಿಕೊಂಡಿದ್ದೆವು ಎಂದು ಗಂಗೂಲಿ ಹೇಳಿದ್ದರು. ಆದರೆ ಕೊಹ್ಲಿ ನನಗೆ ಯಾರೂ ನಾಯಕತ್ವದಿಂದ ಕೆಳಗಿಳಿಯದಂತೆ ಮನವಿ ಮಾಡಿರಲಿಲ್ಲ ಎಂದಿದ್ದರು. ಈ ತದ್ವಿರುದ್ಧ ಹೇಳಿಕೆಗಳು ಬಿಸಿಸಿಐ-ಕೊಹ್ಲಿ ನಡುವೆ ಶೀತಲ ಸಮರಕ್ಕೆ ಕಾರಣವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಕೋಚ್ ರವಿಶಾಸ್ತ್ರಿ, ಇಲ್ಲಿ ಯಾರು ಸುಳ್ಳು ಹೇಳುತ್ತಿದ್ದಾರೆ ಎಂಬ ಪ್ರಶ್ನೆ ಬರುವುದಿಲ್ಲ. ಕೊಹ್ಲಿ ಈಗಾಗಲೇ ತಮ್ಮ ಭಾಗದ ಕತೆ ಹೇಳಿದ್ದಾರೆ. ಈಗ ಗಂಗೂಲಿ ಬಾಯ್ಬಿಡಲಿ. ಅವರ ಅಭಿಪ್ರಾಯವನ್ನು ಬಹಿರಂಗವಾಗಿ ಹೇಳಿಕೊಳ್ಳಲಿ. ಆಗ ವಿವಾದ ಬಗೆಹರಿಯುತ್ತದೆ ಎಂದಿದ್ದಾರೆ. ಅಷ್ಟೇ ಅಲ್ಲ, ಕೊಹ್ಲಿ ನಾಯಕತ್ವವನ್ನು ಹೊಗಳಿದ್ದಾರೆ.