Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮುಂಬೈ: ಟೀಂ ಇಂಡಿಯಾ ಆಲ್ ರೌಂಡರ್ ರವೀಂದ್ರ ಜಡೇಜಾ ಮಾಡಿದ ಟ್ವೀಟ್ ಒಂದು ಈಗ ನೆಟ್ಟಿಗರಿಂದ ಟ್ರೋಲ್ ಗೊಳಗಾಗಿದೆ.
ಭಾರತ ಮತ್ತು ಶ್ರೀಲಂಕಾ ನಡುವೆ ಪಂದ್ಯ ನಡೆಯುತ್ತಿದ್ದಾಗ ಜಡೇಜಾ ಏನೂ ಹೇಳಬೇಡಿ. ನಕ್ಕು ಬಿಡಿ ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟು ಟ್ವೀಟ್ ಮಾಡಿದ್ದರು. ಇತ್ತೀಚೆಗೆ ಜಡೇಜಾ ಗಾಯಗೊಂಡು ತಂಡದಿಂದ ಹೊರನಡೆದ ಬಳಿಕ ಅಕ್ಸರ್ ಪಟೇಲ್, ವಾಷಿಂಗ್ಟನ್ ಸುಂದರ್ ಆಲ್ ರೌಂಡರ್ ಗಳಾಗಿ ಸೀಮಿತ ಓವರ್ ಗಳ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಹೀಗಾಗಿ ಜಡೇಜಾ ಕೊರತೆ ಕಾಣುತ್ತಿಲ್ಲ. ಜಡೇಜಾ ವಾಪಸ್ ಆದರೂ ತಂಡದಲ್ಲಿ ಅವರಿಗೆ ಸ್ಥಾನ ಸಿಗುವುದು ಕಷ್ಟ ಎಂದು ಹಲವರು ಅಭಿಪ್ರಾಯಪಡುತ್ತಿದ್ದಾರೆ. ಈ ವಾದಗಳಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟು ಜಡೇಜಾ ಮೇಲಿನಂತೆ ಟ್ವೀಟ್ ಮಾಡಿದ್ದರು. ಆದರೆ ಜಡೇಜಾ ಅಂತಹದ್ದೊಂದು ಟ್ವೀಟ್ ಮಾಡಿದ್ದಕ್ಕೆ ನೆಟ್ಟಿಗರು ಅವರನ್ನು ಟ್ರೋಲ್ ಮಾಡಿದ್ದಾರೆ. ಅಕ್ಸರ್ ಪಟೇಲ್ ನಗುತ್ತಿರುವ ಫೋಟೋ ಹಾಕಿ, ವಿವಿಧ ಮೆಮೆಗಳ ಮೂಲಕ ಜಡೇಜಾರನ್ನು ಟ್ರೋಲ್ ಮಾಡಲಾಗಿದೆ.