Select Your Language

Notifications

webdunia
webdunia
webdunia
webdunia

ಮೊದಲ ಟೆಸ್ಟ್ ನಲ್ಲೂ ರವೀಂದ್ರ ಜಡೇಜಾ ಆಡುವುದು ಅನುಮಾನ

ರವೀಂದ್ರ ಜಡೇಜಾ
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟಿ20 ಪಂದ್ಯದ ವೇಳೆ ತಲೆಗೆ ಚೆಂಡು ತಗುಲಿ ಗಾಯಕ್ಕೊಳಗಾದ ಟೀಂ ಇಂಡಿಯಾ ಆಲ್ ರೌಂಡರ್ ರವೀಂದ್ರ ಜಡೇಜಾ ಮೊದಲ ಟೆಸ್ಟ್ ಪಂದ್ಯದಲ್ಲೂ ಆಡುವುದು ಅನುಮಾನವೆನ್ನಲಾಗಿದೆ.

 

ಚೆಂಡು ತಗುಲಿದ ಪರಿಣಾಮ ತಲೆಸುತ್ತು ಬಂದ ಕಾರಣ ಜಡೇಜಾರಿಗೆ ವಿಶ್ರಾಂತಿ ತೆಗೆದುಕೊಳ್ಳಲು ವೈದ್ಯರು ಸೂಚಿಸಿದ್ದರು. ಅದರಂತೆ ಅವರು ಉಳಿದ ಎರಡೂ ಟಿ20 ಪಂದ್ಯಗಳಿಂದ ಹೊರಬಿದ್ದಿದ್ದರು. ಆದರೆ ಈಗ ಡಿಸೆಂಬರ್ 17 ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ನಲ್ಲೂ ಅವರು ಆಡುವುದು ಅನುಮಾನವೆನ್ನಲಾಗಿದೆ. ಸದ್ಯಕ್ಕೆ ಅವರು ವೈದ್ಯರ ನಿಗಾದಲ್ಲಿದ್ದು, ಪರಿಸ್ಥಿತಿ ನೋಡಿಕೊಂಡು ಅವರ ಲಭ್ಯತೆ ಬಗ್ಗೆ ನಿರ್ಧಾರಕ್ಕೆ ಬರಲಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಟೀಂ ಇಂಡಿಯಾ ಗೆದ್ದರೆ ವಿರಾಟ್ ಕೊಹ್ಲಿ ದಾಖಲೆ