Webdunia - Bharat's app for daily news and videos

Install App

ಇನ್ನು ಕೆಲವು ದಿನ ಬೆಂಗಳೂರೇ ನನ್ನ ಮನೆ ಎಂದ ರವೀಂದ್ರ ಜಡೇಜಾ

Krishnaveni K
ಬುಧವಾರ, 31 ಜನವರಿ 2024 (11:18 IST)
ಬೆಂಗಳೂರು: ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಿಂದ ಗಾಯಗೊಂಡಿರುವ ರವೀಂದ್ರ ಜಡೇಜಾ ಹೊರಬಿದ್ದಿದ್ದಾರೆ. ಅವರ ಬದಲು ತಂಡಕ್ಕೆ ಸೌರಭ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ.

ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದ ವೇಳೆ ಜಡೇಜಾ ತಮ್ಮ ಮಂಡಿಗೆ ಗಾಯ ಮಾಡಿಕೊಂಡಿದ್ದರು. ಹೀಗಾಗಿ ಅವರನ್ನು ಮುಂದಿನ ಟೆಸ್ಟ್ ಪಂದ್ಯದಿಂದ ಹೊರಗಿಡಲಾಗಿದೆ. ಅವರು ಮತ್ತೆ ಯಾವಾಗ ತಂಡಕ್ಕೆ ಮರಳಲಿದ್ದಾರೆ ಎನ್ನುವುದು ಖಚಿತವಾಗಿಲ್ಲ.

 ಈ ನಡುವೆ ಹೈದರಾಬಾದ್ ನಿಂದ ಜಡೇಜಾ ನೇರವಾಗಿ ಬೆಂಗಳೂರಿನ ಎನ್ ಸಿಎಗೆ ಬಂದಿದ್ದಾರೆ. ಗಾಯಗೊಂಡ ಟೀಂ ಇಂಡಿಯಾ ಆಟಗಾರರು ಇಲ್ಲಿನ ವೈದ್ಯಕೀಯ ತಂಡದ ನಿಗಾದಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ. ಬಳಿಕ ಎನ್ ಸಿಎ ಫಿಟ್ನೆಸ್ ಸರ್ಟಿಫಿಕೇಟ್ ಪಡೆದ ನಂತರವಷ್ಟೇ ತಂಡಕ್ಕೆ ಮರಳಬಹುದಾಗಿದೆ.

ಇದೀಗ ಜಡೇಜಾ ಕೂಡಾ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಬೆಂಗಳೂರಿಗೆ ಬಂದಿಳಿದಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಎನ್ ಸಿಎ ಫೋಟೋ ಪ್ರಕಟಿಸಿರುವ ಅವರು ಇನ್ನು ಕೆಲವು ದಿನ ಇದೇ ನನ್ನ ಮನೆ ಎಂದಿದ್ದಾರೆ.

ಜಡೇಜಾ ಜೊತೆಗೆ ಕೆಎಲ್ ರಾಹುಲ್ ಕೂಡಾ ತೊಡೆ ನೋವಿಗೊಳಗಾಗಿರುವುದರಿಂದ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಅವರೂ ಎನ್ ಸಿಎ ಸೇರಲಿದ್ದಾರೆ. ಈಗಾಗಲೇ ಗಾಯಗೊಂಡಿರುವ ಕೆಲವು ಆಟಗಾರರು ಎನ್ ಸಿಎನಲ್ಲಿದ್ದಾರೆ. ಅವರ ಜೊತೆ ಜಡೇಜಾ, ರಾಹುಲ್ ಕೂಡಾ ಸೇರಿಕೊಳ್ಳಲಿದ್ದಾರೆ. ಫೆಬ್ರವರಿ 2 ರಿಂದ ವಿಶಾಖಪಟ್ಟಣಂನಲ್ಲಿ ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಈಗಾಗಲೇ ತಂಡದಿಂದ ಹೊರಗುಳಿದಿರುವ ವಿರಾಟ್ ಕೊಹ್ಲಿ ಜೊತೆಗೆ ಸ್ಟಾರ್ ಆಟಗಾರರಾದ ಜಡೇಜಾ, ರಾಹುಲ್‍ ಅನುಪಸ್ಥಿತಿ ತಂಡಕ್ಕೆ ಬಹುವಾಗಿ ಕಾಡಲಿರುವುದು ಖಂಡಿತಾ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಟೀಂ ಇಂಡಿಯಾ ಸಹಾಯಕ ಸಿಬ್ಬಂದಿ ವಿಕೆಟ್ ಪತನ: ಗೌತಮ್ ಗಂಭೀರ್ ಆಪ್ತ ರಾಜೀನಾಮೆ

IND vs SL: ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಕಟ: ಕೆಎಲ್ ರಾಹುಲ್ ಗೆ ಮಹತ್ವದ ಜವಾಬ್ಧಾರಿ

ಫಾರ್ಮ್ ಇಲ್ಲ ಅಂದ್ರೆ ಡ್ರಾಪ್ ಮಾಡೋದು ಸಂಜು ಸ್ಯಾಮ್ಸನ್ ಗೆ ಮಾತ್ರನಾ: ಅಭಿಷೇಕ್ ಶರ್ಮಾ ಏನು ಸ್ಪೆಷಲ್

ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು: ಶ್ರೇಯಸ್‌ ಅಯ್ಯರ್‌ ಪಡೆಗೆ ಮೊದಲ ಸರಣಿಯ ಜಯದ ಪುಳಕ

ZIM VS IND T20I: ಸತತ ಎರಡನೇ ಪಂದ್ಯದಲ್ಲೂ ಎಡವಿದ ಸ್ಟಾರ್ ಬ್ಯಾಟರ್‌, ಅಭಿಷೇಕ್ ಶರ್ಮಾ ಅವರನ್ನು ಕೈಬಿಡಲಾಗುವುದೇ

ಮುಂದಿನ ಸುದ್ದಿ
Show comments