ಎಡ್ಜ್ ಬಾಸ್ಟನ್: ರವಿಚಂದ್ರನ್ ಅಶ್ವಿನ್ ಈ ಋತುವಿನಲ್ಲಿ ಟೀಂ ಇಂಡಿಯಾದಲ್ಲಿ ಅವಕಾಶ ಸಿಗದಿದ್ದಾಗಲೆಲ್ಲಾ ಕೌಂಟಿ ಕ್ರಿಕೆಟ್ ನಲ್ಲಿ ಆಡಿದ್ದಕ್ಕೆ ತಕ್ಕ ಫಲವನ್ನೇ ಪಡೆದಿದ್ದಾರೆ.
ಇಂಗ್ಲೆಂಡ್ ವಿರುದ್ಧ ಪ್ರಥಮ ಟೆಸ್ಟ್ ನ ಮೊದಲ ದಿನ ವೇಗಿಗಳನ್ನೂ ಮೀರಿಸಿರುವ ರವಿಚಂದ್ರನ್ ಅಶ್ವಿನ್ ನಾಲ್ಕು ವಿಕೆಟ್ ಕಿತ್ತು ತಮ್ಮ ಅನುಭವವನ್ನು ಸಾಬೀತುಪಡಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಆರಂಭಿಕ ಅಲೆಸ್ಟರ್ ಕುಕ್ ರನ್ನು 13 ರನ್ ಗೆ ಔಟ್ ಮಾಡುವ ಮೂಲಕ 8 ನೇ ಬಾರಿ ಅವರ ಬಲಿ ಪಡೆದು ದಾಖಲೆ ಮಾಡಿದರು.
ತಮ್ಮ ಸ್ಪೆಲ್ ನಲ್ಲಿ ಆಫ್ ಸ್ಪಿನ್, ಲೆಗ್ ಸ್ಪಿನ್ ಮಿಶ್ರಿತ ಬೌಲಿಂಗ್ ನಡೆಸಿದ ರವಿಚಂದ್ರನ್ ಅಶ್ವಿನ್ ಬೌಲಿಂಗ್ ಜಾಡು ಹಿಡಿಯಲಾಗದೆ ಇಂಗ್ಲೆಂಡ್ ಮುಗ್ಗರಿಸಿತು. ಅಂತೂ ತಮ್ಮ ಅನುಭವ ತಂಡಕ್ಕೆ ಎಷ್ಟು ಮುಖ್ಯ ಎನ್ನುವುದನ್ನು ಅಶ್ವಿನ್ ಸಾಬೀತು ಪಡಿಸಿದರು.
ದಿನದಂತ್ಯಕ್ಕೆ ಇಂಗ್ಲೆಂಡ್ 6 ವಿಕೆಟ್ ನಷ್ಟಕ್ಕೆ 285 ರನ್ ಗಳಿಗೆ 9 ವಿಕೆಟ್ ಕಳೆದುಕೊಂಡಿದೆ. ಮೊಹಮ್ಮದ್ ಶಮಿ 2 ವಿಕೆಟ್ ಕಿತ್ತರೆ ಇಶಾಂತ್ ಶರ್ಮಾ, ಉಮೇಶ್ ಯಾದವ್ ಗೆ 1 ವಿಕೆಟ್ ಕಿತ್ತರು. ವಿಶೇಷವೆಂದರೆ ಕ್ಯಾಪ್ಟನ್ ಜೋ ರೂಟ್ ರನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ರನೌಟ್ ಮಾಡಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.