Publish Date: Tue, 10 Sep 2019 (10:51 IST)
Updated Date: Tue, 10 Sep 2019 (10:53 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗರಿಗೆ ಇತ್ತೀಚೆಗಿನ ದಿನಗಳಲ್ಲಿ ಫಿಟ್ನೆಸ್ ನದ್ದೇ ಸಮಸ್ಯೆ. ಯೋ ಯೋ ಟೆಸ್ಟ್ ಪಾಸಾಗದೇ ಇದ್ದರೆ ತಂಡಕ್ಕೆ ಆಯ್ಕೆಯಾಗದೇ ಎಷ್ಟೋ ಕ್ರಿಕೆಟಿಗರು ಸಂಕಟ ಅನುಭವಿಸಿದ್ದಿದೆ. ಆದರೆ ಕೋಚ್ ರವಿಶಾಸ್ತ್ರಿಯ ನಿರ್ಧಾರವೊಂದು ಆ ಚಿಂತೆಯನ್ನು ಮತ್ತಷ್ಟು ಹೆಚ್ಚಿಸಲಿದೆ.
ಯೋ ಯೋ ಟೆಸ್ಟ್ ನಲ್ಲಿ ಪಾಸಾಗಬೇಕಿದ್ದರೆ ಸದ್ಯಕ್ಕೆ ಕ್ರಿಕೆಟಿಗರು 16.1 ಅಂಕ ಗಳಿಸಬೇಕು. ಇದೂ ಕೆಲವು ಕ್ರಿಕೆಟಿಗರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಫಾರ್ಮ್, ಪ್ರತಿಭೆ ಇದ್ದರೂ ಫಿಟ್ನೆಸ್ ಅಂಕ ಸಿಗದೇ ಟೀಂ ಇಂಡಿಯಾಕ್ಕೆ ಆಯ್ಕೆಯಾಗುತ್ತಿಲ್ಲ.
ಆದರೆ ಈಗ ಕೋಚ್ ರವಿಶಾಸ್ತ್ರಿ ಆ ಅಂಕ ಮಾನದಂಡವನ್ನು 17 ಕ್ಕೆ ಏರಿಕೆ ಮಾಡಲು ಚಿಂತನೆ ನಡೆಸಿದ್ದಾರೆ. ಈ ಬಗ್ಗೆ ಈಗಾಗಲೇ ಸಂಬಂಧಪಟ್ಟವರೊಂದಿಗೆ ರವಿಶಾಸ್ತ್ರಿ ಮಾತುಕತೆಯನ್ನೂ ನಡೆಸಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಟೀಂ ಇಂಡಿಯಾಕ್ಕೆ ಸ್ಥಾನ ಪಡೆಯುವುದು ಕ್ರಿಕೆಟಿಗರಿಗೆ ಇನ್ನೂ ಕಷ್ಟವಾಗಲಿದೆ.