ಮುಂಬೈ: ಟೀಂ ಇಂಡಿಯಾವನ್ನು ಕಳೆದ ನಾಲ್ಕು ವರ್ಷಗಳಿಂದ ಮುನ್ನಡೆಸಿದ್ದ ಕೊಹ್ಲಿ-ಶಾಸ್ತ್ರಿ ಜೋಡಿಯ ಯುಗಾಂತ್ಯವಾಗಿದೆ.
ನಿನ್ನೆ ನಡೆದ ಟಿ20 ಪಂದ್ಯದ ಬಳಿಕ ಟೀಂ ಇಂಡಿಯಾ ಕೋಚ್ ಆಗಿ ರವಿಶಾಸ್ತ್ರಿ ಅವಧಿ ಮುಕ್ತಾಯವಾಗಿದೆ. ಅತ್ತ ನಾಯಕ ಕೊಹ್ಲಿಗೂ ಟಿ20 ಮಾದರಿಯಲ್ಲಿ ನಾಯಕರಾಗಿ ಇದು ಕೊನೆಯ ಪಂದ್ಯವಾಗಿತ್ತು.
ಅನಿಲ್ ಕುಂಬ್ಳೆ ಜೊತೆಗೆ ಕೊಹ್ಲಿ ವೈಮನಸ್ಯದ ಬಳಿಕ ಟೀಂ ಇಂಡಿಯಾ ನೂತನ ಕೋಚ್ ಆಗಿ ಆಯ್ಕೆಯಾದ ರವಿಶಾಸ್ತ್ರಿ ಸತತ ನಾಲ್ಕು ವರ್ಷ ಈ ಹುದ್ದೆಯಲ್ಲಿ ಮುಂದುವರಿದರು. ಆಸ್ಟ್ರೇಲಿಯಾ ನೆಲದಲ್ಲಿ ಗೆಲುವು, ಟೆಸ್ಟ್ ನಲ್ಲಿ ಗಮನಾರ್ಹ ಸಾಧನೆಗಳು ಬಿಟ್ಟರೆ ಅವರು ಕೋಚ್ ಆಗಿ, ಕೊಹ್ಲಿ ನಾಯಕರಾಗಿ ಟೀಂ ಇಂಡಿಯಾಕ್ಕೆ ಒಂದೇ ಒಂದು ಐಸಿಸಿ ಪ್ರಶಸ್ತಿ ಬಂದಿಲ್ಲ ಎನ್ನುವುದು ಗಮನಾರ್ಹ. ಹೀಗಾಗಿ ನಿವೃತ್ತರಾಗುವ ಸಂದರ್ಭದಲ್ಲಿ ಅವರಿಗೆ ಆ ನೋವು ಕಾಡಿಯೇ ಕಾಡುತ್ತದೆ. ಇನ್ನೀಗ ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಆಗಿ ತಂಡದ ಚುಕ್ಕಾಣಿ ಹಿಡಿಯಲಿದ್ದು, ಹೊಸ ನಾಯಕನಾಗಿ ರೋಹಿತ್ ಆಯ್ಕೆಯಾಗುವ ಸಾಧ‍್ಯತೆಯಿದೆ.