ದುಬೈ: ಟೀಂ ಇಂಡಿಯಾ ಕ್ರಿಕೆಟಿಗರಿಗೆ ಬಿಡುವಿಲ್ಲದ ಕ್ರಿಕೆಟ್ ನ ಜೊತೆಗೆ ಈಗ ಬಯೋ ಬಬಲ್ ವಾತಾವರಣದಲ್ಲಿ ಏಗುವುದು ಅತೀ ದೊಡ್ಡ ಸವಾಲಾಗಿದೆ.
ಕಳೆದೊಂದು ವರ್ಷದಿಂದ ಕ್ರಿಕೆಟಿಗರು ಜೈವ ಸುರಕ್ಷಾ ವಲಯದಲ್ಲಿ ಬಂಧಿಗಳಾಗಿದ್ದಾರೆ. ಹೊರಗೆ ಮನಸೋ ಇಚ್ಛೆ ಓಡಾಡುವಂತಿಲ್ಲ. ಹೊರಗಿನವರನ್ನು ಭೇಟಿಯಾಗುವಂತಿಲ್ಲ. ಕುಟುಂಬದವರ ಜೊತೆ ಬೇಕೆಂದಾಗ ಇರುವಂತಿಲ್ಲ.
ಒಟ್ಟಿನಲ್ಲಿ ದೈಹಿಕ ಕ್ಷಮತೆ ಜೊತೆಗೆ ಮಾನಸಿಕವಾಗಿಯೂ ಆಟಗಾರರು ಹೋರಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಈಗಾಗಲೇ ನಾಯಕ ಕೊಹ್ಲಿ ಈ ಬಗ್ಗೆ ಅನೇಕ ಬಾರಿ ಮಾತನಾಡಿದ್ದಾರೆ. ಇತ್ತೀಚೆಗೆ ಕುರ್ಚಿಯಲ್ಲಿ ತಮ್ಮನ್ನು ಕಟ್ಟಿ ಹಾಕಿದ ಫೋಟೋ ಪ್ರಕಟಿಸಿ ಸದ್ಯಕ್ಕೆ ಬಯೋ ಬಬಲ್ ನಲ್ಲಿ ನಮ್ಮ ಸ್ಥಿತಿಯೂ ಇದೇ ಆಗಿದೆ ಎಂದಿದ್ದಾರೆ. ಆದಷ್ಟು ಬೇಗ ಕೊರೋನಾ ಭಯ ಹೋಗಿ ಬಯೋ ಬಬಲ್ ವಾತಾವರಣ ಬಂದ್ ಆಗದೇ ಹೋದರೆ ಕ್ರಿಕೆಟಿಗರು ಮಾನಸಿಕ ಕಾರಣ ನೀಡಿ ಟೂರ್ನಿಗಳಿಂದ ಹಿಂದೆ ಸರಿಯುವ ನಿದರ್ಶನಗಳು ಹೆಚ್ಚಬಹುದು.