Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಚೆನ್ನೈ: ರಣಜಿ ಟ್ರೋಫಿ ಕ್ರಿಕೆಟ್ ನ ಗ್ರೂಪ್ ಸಿ ವಿಭಾಗದ ಲೀಗ್ ಪಂದ್ಯದಲ್ಲಿ ರೈಲ್ವೇಸ್ ವಿರುದ್ಧ ಕರ್ನಾಟಕ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದೆ.
ಮೊದಲ ದಿನದಂತ್ಯಕ್ಕೆ ಕರ್ನಾಟಕ 5 ವಿಕೆಟ್ ನಷ್ಟಕ್ಕೆ 392 ರನ್ ಗಳಿಸಿ ಭರ್ಜರಿ ಮೊತ್ತ ಕಲೆ ಹಾಕಿದೆ. ಕರ್ನಾಟಕ ಪರ ಮನೀಶ್ ಪಾಂಡೆ 156 ರನ್ ಗಳಿಸಿದರೆ ಕೃಷ್ಣಮೂರ್ತಿ ಸಿದ್ಧಾರ್ಥ್ ಅಜೇಯ 140 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.
ಇದಕ್ಕೂ ಮೊದಲು ಆರಂಭಿಕರಾಗಿ ಕಣಕ್ಕಿಳಿದಿದ್ದ ದೇವದತ್ತ್ ಪಡಿಕ್ಕಲ್ 21 ಮತ್ತು ಮಯಾಂಕ್ ಅಗರ್ವಾಲ್ 16 ರನ್ ಗಳಿಗೆ ವಿಕೆಟ್ ಒಪ್ಪಿಸಿದ್ದರು. ಮನೀಶ್, ಸಿದ್ಧಾರ್ಥ್ ಜೋಡಿ ಕರ್ನಾಟಕಕ್ಕೆ ಆಧಾರವಾಯಿತು.