Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರಾಂಚಿ ಟೆಸ್ಟ್: ದ.ಆಫ್ರಿಕಾ ವೈಟ್ ವಾಶ್ ಮಾಡಿ ಇತಿಹಾಸ ನಿರ್ಮಿಸಿದ ಟೀಂ ಇಂಡಿ

ರಾಂಚಿ ಟೆಸ್ಟ್: ದ.ಆಫ್ರಿಕಾ ವೈಟ್ ವಾಶ್ ಮಾಡಿ ಇತಿಹಾಸ ನಿರ್ಮಿಸಿದ ಟೀಂ ಇಂಡಿ
ರಾಂಚಿ , ಮಂಗಳವಾರ, 22 ಅಕ್ಟೋಬರ್ 2019 (09:48 IST)
ರಾಂಚಿ: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆದ ಮೂರನೇ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಹಾಗೂ 202 ರನ್ ಗಳಿಂದ ಭರ್ಜರಿಯಾಗಿ ಗೆದ್ದುಕೊಂಡ ಟೀಂ ಇಂಡಿಯಾ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿ ಇತಿಹಾಸ ನಿರ್ಮಿಸಿದೆ.


ಇದೇ ಮೊದಲ ಬಾರಿಗೆ ದ.ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಕ್ಲೀನ್ ಸ್ವೀಪ್ ಮಾಡಿದ ದಾಖಲೆ ಮಾಡಿದೆ. ನಿನ್ನೆ 8 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಯಲ್ಲಿದ್ದ ಆಫ್ರಿಕನ್ನರು ಇಂದು ನಿನ್ನೆಯ ಮೊತ್ತಕ್ಕೆ ಕೇವಲ 5 ರನ್ ಸೇರಿಸಿ ಉಳಿದ ಎರಡು ವಿಕೆಟ್ ಗಳನ್ನು ಶಹಬಾಜ್ ನದೀಂಗೆ ಒಪ್ಪಿಸಿ ವೈಟ್ ವಾಶ್ ಮಾಡಿಸಿಕೊಂಡಿದೆ.

ಇದರೊಂದಿಗೆ ಟೀಂ ಇಂಡಿಯಾ ಆಫ್ರಿಕಾ ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡಂತಾಗಿದೆ. ಈ ರೀತಿ ಒಂದೇ ಸರಣಿಯಲ್ಲಿ ಎರಡಕ್ಕೂ ಹೆಚ್ಚು ಪಂದ್ಯಗಳನ್ನು ಸೋತು ಸರಣಿ ಸೋತಿದ್ದು ದ.ಆಫ್ರಿಕಾ 1935 ರಲ್ಲಿ. ಇದಾದ ಬಳಿಕ ಇದೇ ಮೊದಲ ಬಾರಿಗೆ ಇಂತಹದ್ದೊಂದು ಹೀನಾಯ ಸೋಲು ಕಾಣುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೈದಾನದಲ್ಲಿ ವಿರಾಟ್ ಕೊಹ್ಲಿ ಹುಲಿ ವೇಷ