Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಗೆಲುವಿಗೆ ಎರಡು ವಿಕೆಟ್ ಪಡೆಯಬೇಕಿರುವ ಟೀಂ ಇಂಡಿಯಾಕ್ಕೆ ಎದುರಾಗಿದೆ ಹೊಸ ಆತಂಕ!

ಗೆಲುವಿಗೆ ಎರಡು ವಿಕೆಟ್ ಪಡೆಯಬೇಕಿರುವ ಟೀಂ ಇಂಡಿಯಾಕ್ಕೆ ಎದುರಾಗಿದೆ ಹೊಸ ಆತಂಕ!
ಮೆಲ್ಬೋರ್ನ್ , ಶನಿವಾರ, 29 ಡಿಸೆಂಬರ್ 2018 (14:00 IST)
ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ತೃತೀಯ ಟೆಸ್ಟ್ ಪಂದ್ಯದಲ್ಲಿ ಗೆಲುವಿಗೆ ಇನ್ನು ಎರಡೇ ವಿಕೆಟ್ ಕಬಳಿಸಬೇಕಿರುವ ಟೀಂ ಇಂಡಿಯಾಕ್ಕೆ ಹೊಸ ಆತಂಕವೊಂದು ಎದುರಾಗಿದೆ.


ನಾಳೆಯ ಹವಾಮಾನ ವರದಿ ಪ್ರಕಾರ ಮೆಲ್ಬೋರ್ನ್ ನಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಒಂದು ವೇಳೆ ಮಳೆ ಸುರಿದು ಇಡೀ ದಿನದ ಆಟ ರದ್ದಾದರೆ ಪಂದ್ಯವೂ ಡ್ರಾ ಆಗಲಿದೆ. ಇದರಿಂದ ಅನ್ಯಾಯವಾಗುವುದು ಭಾರತಕ್ಕೆ. ಅತ್ತ ಆಸ್ಟ್ರೇಲಿಯಾ ಸೋಲಿನ ಅವಮಾನದಿಂದ ತಪ್ಪಿಸಿಕೊಳ್ಳಲಿದೆ. ಇಂದಿನ ಹವಾಮಾನ ಮುನ್ಸೂಚನೆ ಪ್ರಕಾರ ನಾಳೆ ಶೇ.60 ರಷ್ಟು ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಇಂದು ನಾಲ್ಕನೇ ದಿನದಂತ್ಯಕ್ಕೆ ಭಾರತ ನೀಡಿರುವ 399 ರನ್ ಗಳ ಗುರಿ ಬೆನ್ನತ್ತಿರುವ ಆಸೀಸ್ 8 ವಿಕೆಟ್ ಕಳೆದುಕೊಂಡು  258 ರನ್ ಗಳಿಸಿದೆ. ಆಸೀಸ್ ಪರ ಬಾಲಂಗೋಚಿಗಳು ಪ್ರಬಲ ಪ್ರತಿರೋಧ ಒಡ್ಡಿರುವುದರಿಂದ ಭಾರತ ಇಂದೇ ಗೆಲ್ಲುವ ಅವಕಾಶ ಕಳೆದುಕೊಂಡಿದೆ. ಆಸೀಸ್ ಪರ ಪ್ಯಾಟ್ ಕ್ಯುಮಿನ್ಸ್ 61 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಆಸೀಸ್ ಗೆಲ್ಲಲು ಇನ್ನೂ 141 ರನ್ ಗಳಿಸಬೇಕಿದೆ. ಯಾವುದಕ್ಕೂ ಮಳೆ ಬಾರದಿರಲಿ ಎಂದು ಭಾರತ ಪ್ರಾರ್ಥಿಸುತ್ತಿದ್ದರೆ, ಆಸೀಸ್ ಮಳೆ ಬಂದು ಮಾನ ಕಾಪಾಡಲಿ ಎಂದು ಬೇಡಿಕೊಳ್ಳುವಂತಾಗಿದೆ!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಕ್ರಿಕೆಟಿಗರನ್ನು ಕೆಣಕುತ್ತಿದ್ದ ಆಸ್ಟ್ರೇಲಿಯಾ ನಾಯಕ ಟಿಮ್ ಪೇಯ್ನ್ ಗೆ ತಕ್ಕ ಶಾಸ್ತಿ ಮಾಡಿದ ರಿಷಬ್ ಪಂತ್!