Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮುಂಬೈ: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಬೇಕಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ಆರಂಭಕ್ಕೂ ಮೊದಲೇ ವರುಣನ ವಿಘ‍್ನ ಎದುರಾಗಿದೆ.
ಒದ್ದೆ ಅಂಗಣದಿಂದಾಗಿ ಟಾಸ್ ತಡವಾಗಿ ನಡೆಯಲಿದೆ. ಬೌಲಿಂಗ್ ರನ್ ಅಪ್ ಸುತ್ತಮುತ್ತ ಅಂಕಣ ತೀರಾ ಒದ್ದೆಯಾಗಿದೆ. ಹೀಗಾಗಿ 9.30 ಕ್ಕೆ ಮತ್ತೊಮ್ಮೆ ಪರೀಕ್ಷಿಸಿ ಟಾಸ್ ನಡೆಯಲಿದೆ.
ರಾತ್ರಿ ಮಳೆಯಾಗಿದ್ದರಿಂದ ಮೈದಾನ ಪೂರ್ತಿ ಒದ್ದೆಯಾಗಿದೆ. ಹೀಗಾಗಿ ಪಂದ್ಯ ತಡವಾಗಿ ಆರಂಭವಾಗಲಿದೆ. ಪಿಚ್ ಒದ್ದೆಯಾಗಿರುವುದರಿಂದ ಬ್ಯಾಟಿಂಗ್ ಕಷ್ಟವಾಗಬಹುದು. ಹೀಗಾಗಿ ಅದಕ್ಕೆ ಅನುಗುಣವಾಗಿ ಉಭಯ ತಂಡಗಳು ತಮ್ಮ ಆಡುವ ಬಳಗ ಆಯ್ಕೆ ಮಾಡಬಹುದು.