Webdunia - Bharat's app for daily news and videos

Install App

ಮಳೆಯಿಂದಾಗಿ ಟೀಂ ಇಂಡಿಯಾಕ್ಕೆ ಅನ್ಯಾಯವಾದ ಐಸಿಸಿ ಕೂಟದ ಫೈನಲ್ಸ್ ಪಂದ್ಯಗಳು

Webdunia
ಗುರುವಾರ, 24 ಜೂನ್ 2021 (11:24 IST)
ಮುಂಬೈ: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ಸ್ ನ ಆರಂಭದಿಂದ ಕೊನೆಯವರೆಗೂ ಮಳೆ ಶಾಪವಾಗಿ ಕಾಡಿತು. ಇದರಿಂದಾಗಿ ಆಟದ ರಸದೌತಣವೇ ಹಾಳಾಯಿತು ಎನ್ನುವ ಬೇಸರ ಅಭಿಮಾನಿಗಳದ್ದು.


ಆದರೆ ಟೀಂ ಇಂಡಿಯಾಗೆ ಐಸಿಸಿಯ ಕೂಟದ ಫೈನಲ್ಸ್ ನಲ್ಲಿ ಮಳೆ ಕಾಟ ಕೊಟ್ಟಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು 2002 ರಲ್ಲಿ ಗಂಗೂಲಿ ನಾಯಕತ್ವದಲ್ಲಿ ಭಾರತ-ಶ್ರೀಲಂಕಾ ಐಸಿಸಿ ಚಾಂಪಿಯನ್ ಟ್ರೋಫಿ ಫೈನಲ್ ಪಂದ್ಯಕ್ಕೂ ಮಳೆ ಅಡ್ಡಿಯಾಯಿತು. ಆ ಕೂಟದಲ್ಲಿ ಅದ್ಭುತ ಫಾರ್ಮ್ ನಲ್ಲಿದ್ದ ಭಾರತ ಏಕೈಕ ಚಾಂಪಿಯನ್ ಆಗಿ ಹೊರಹೊಮ್ಮುವ ಎಲ್ಲಾ ಸಾಧ‍್ಯತೆಯಿತ್ತು. ಆದರೆ ಮಳೆಯಿಂದಾಗಿ ಪಂದ್ಯ ಪೂರ್ತಿಯಾಗದೇ ಭಾರತ-ಲಂಕಾ ಜಂಟಿ ವಿಜಯಿಗಳೆಂದು ಘೋಷಿಸಬೇಕಾಯಿತು. ಅಂದೂ ಹೆಚ್ಚು ಅನ್ಯಾಯವಾಗಿದ್ದು ಭಾರತಕ್ಕೆ.

ಇದಾದ ಬಳಿಕ 2004 ರಲ್ಲಿ ಮತ್ತೆ ಗಂಗೂಲಿ ನಾಯಕತ್ವದಲ್ಲಿ ಭಾರತ ಏಕದಿನ ವಿಶ್ವಕಪ್ ಫೈನಲ್ ಗೆ ಲಗ್ಗೆಯಿಟ್ಟಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ಭರ್ಜರಿ ಮೊತ್ತ ಕಲೆ ಹಾಕಿತು. ಆದರೆ ಇದನ್ನು ಭಾರತ  ಬೆನ್ನಟ್ಟುವಾಗ ಮಳೆ ಕಾಟ ಕೊಟ್ಟಿತು. ಅಂತಿಮವಾಗಿ ಭಾರತ ಸೋಲುಂಡಿತು.

ಕಳೆದ ಭಾರತ-ನ್ಯೂಜಿಲೆಂಡ್ ನಡುವಿನ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲೂ ಮಳೆ ಎಂಟ್ರಿ ಕೊಟ್ಟಿತ್ತು. ಈ ಪಂದ್ಯವನ್ನೂ ಭಾರತ ಸೋತಿತ್ತು. ಅಂತೂ ಮಳೆ ಎನ್ನುವುದು ಐಸಿಸಿ ಕೂಟಗಳಲ್ಲಿ ಭಾರತದ ಪಾಲಿಗೆ ಶಾಪವಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments