Publish Date: Mon, 24 Dec 2018 (10:28 IST)
Updated Date: Mon, 24 Dec 2018 (10:29 IST)
ತಿರುವನಂತಪುರಂ: ತಮ್ಮ ಬಹುಕಾಲದ ಗೆಳತಿ ಚಾರುಲತಾ ಜತೆಗೆ ಸಪ್ತಪದಿ ತುಳಿದ ಭಾರತ ಎ ತಂಡದ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಆರತಕ್ಷತೆಗೆ ಆಗಮಿಸಿದ ಕೋಚ್ ರಾಹುಲ್ ದ್ರಾವಿಡ್ ಮದುವೆ ರಂಗು ಹೆಚ್ಚಿಸಿದ್ದಾರೆ.
ರಾಹುಲ್ ದ್ರಾವಿಡ್ ಯಾವತ್ತೂ ಮೈದಾನದಲ್ಲಿ ತಮ್ಮ ಹುಡುಗರನ್ನು ಹುರಿದುಂಬಿಸುವ ಮೆಚ್ಚಿನ ಗುರು ಆಗಿ ನೋಡಿದ್ದೇವೆ. ಆದರೆ ಮದುವೆ-ಮುಂಜಿ ಕಾರ್ಯಕ್ರಮಗಳಿಗೆ ಅವರು ಹಾಜರಾಗುವುದು ಕಡಿಮೆ. ಆದರೆ ಶಿಷ್ಯನ ಆರತಕ್ಷತೆ ಕಾರ್ಯಕ್ರಮವನ್ನು ಮಾತ್ರ ಅವರು ತಪ್ಪಿಸಿಲ್ಲ.
ತಿರುವನಂತಪುರಂನ ಹಾಲ್ ಒಂದರಲ್ಲಿ ನಡೆದ ಆರತಕ್ಷತೆ ಕಾರ್ಯಕ್ರಮಕ್ಕೆ ದ್ರಾವಿಡ್ ಅಲ್ಲದೆ ಕೇರಳ ಸಿಎಂ ಪಿಣರಾಯಿ ವಿಜಯನ್ ಸೇರಿದಂತೆ ಹಲವು ಗಣ್ಯರು ಆಗಮಿಸಿ ನವ ಜೋಡಿಗೆ ಶುಭ ಹಾರೈಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ