Publish Date: Friday, 31 December 2021 (09:27 IST)
Updated Date: Friday, 31 December 2021 (09:28 IST)
ಸೆಂಚೂರಿಯನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೊದಲ ಟೆಸ್ಟ್ ನಲ್ಲಿ ಸೋಲಿನ ಬಳಿಕ ಅತಿಥೇಯರಿಗೆ ಮತ್ತೊಂದು ಬೇಸರದ ಸಂಗತಿ ಕೊಟ್ಟಿದೆ.
ದ.ಆಫ್ರಿಕಾದ ಪ್ರಮುಖ ಕ್ರಿಕೆಟಿಗ ಕ್ವಿಂಟನ್ ಡಿ ಕಾಕ್ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. 29 ವರ್ಷದ ವಯಸ್ಸಿನ ಡಿ ಕಾಕ್ ತಮ್ಮ ಕುಟುಂಬದ ಜೊತೆ ಹೆಚ್ಚಿನ ಸಮಯ ಕಳೆಯಲು ಈ ನಿರ್ಧಾರಕ್ಕೆ ಬಂದಿದ್ದಾರೆ.
ಭಾರತದ ವಿರುದ್ಧ ಸೆಂಚೂರಿಯನ್ ನಲ್ಲಿ ನಡೆದ ಪಂದ್ಯ ಅವರ ಪಾಲಿಗೆ ಕೊನೆಯ ಟೆಸ್ಟ್ ಪಂದ್ಯವಾಗಿತ್ತು. 54 ಟೆಸ್ಟ್ ಪಂದ್ಯಗಳಲ್ಲಿ ಆಫ್ರಿಕಾ ಪ್ರತಿನಿಧಿಸಿದ್ದ ಡಿ ಕಾಕ್ 3,3000 ರನ್ ಗಳಿಸಿದ್ದರು.