Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವೇಗಿ ಭುವನೇಶ್ವರ್ ಕುಮಾರ್ ಅವಸ್ಥೆಗೆ ಎನ್ ಸಿಎಯೇ ಕಾರಣ?

ವೇಗಿ ಭುವನೇಶ್ವರ್ ಕುಮಾರ್ ಅವಸ್ಥೆಗೆ ಎನ್ ಸಿಎಯೇ ಕಾರಣ?
ಬೆಂಗಳೂರು , ಭಾನುವಾರ, 15 ಡಿಸೆಂಬರ್ 2019 (09:02 IST)
ಬೆಂಗಳೂರು: ಮೂರು ತಿಂಗಳ ವಿಶ್ರಾಂತಿಯ ಬಳಿಕ ಎರಡು ಪಂದ್ಯಗಳಾಡಿದ ವೇಗಿ ಭುವನೇಶ‍್ವರ್ ಕುಮಾರ್ ಮತ್ತೆ ಗಾಯದ ಸಮಸ್ಯೆಗೆ ಸಿಲುಕಿದ್ದಾರೆ. ಇದರಿಂದಾಗಿ ಈಗ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ (ಎನ್ ಸಿಎ)ಯ ಕಾರ್ಯ ವೈಖರಿ ಬಗ್ಗೆಯೇ ಪ್ರಶ್ನೆ ಮೂಡಿದೆ.


 
ಬೆಂಗಳೂರಿನಲ್ಲಿ ಮೂರು ತಿಂಗಳು ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡರೂ ಭುವನೇಶ್ವರ್ ಕುಮಾರ್ ನಿಜವಾದ ಸಮಸ್ಯೆಯೇನೆಂದು ಪತ್ತೆ ಮಾಡದೇ ಅವರನ್ನು ಫಿಟ್ ಎಂದು ಘೋಷಿಸಿ ಆಟದ ಕಣಕ್ಕೆ ಕಳುಹಿಸಲಾಗಿದೆ ಎಂದು ಆರೋಪಗಳು ಕೇಳಿಬರುತ್ತಿವೆ. ಅಸಲಿಗೆ ಭುವಿಗೆ ಹರ್ನಿಯಾ ಸಮಸ್ಯೆ ಶುರುವಾಗಿದೆ.

ಇದಕ್ಕೂ ಮೊದಲು ಜಸ್ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಗಾಯಗೊಂಡು ಈಗ ವಿಶ್ರಾಂತಿಯಲ್ಲಿದ್ದಾರೆ. ಆದರೆ ಈ ಇಬ್ಬರೂ ಕ್ರಿಕೆಟಿಗರು ಎನ್ ಸಿಎಗೆ ಇದೇ ಕಾರಣಕ್ಕೆ ಬರಲೊಪ್ಪಲಿಲ್ಲ ಎನ್ನಲಾಗಿದೆ. ಈ ಎಲ್ಲಾ ಬೆಳವಣಿಗೆಯಿಂದಾಗಿ ಎನ್ ಸಿಎಯಲ್ಲಿರುವ ತಜ್ಞರ ಬಗ್ಗೆಯೇ ಪ್ರಶ್ನೆ ಮೂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿ ಟಿ20 ವಿಶ್ವಕಪ್ ಆಡುವ ಬಗ್ಗೆ ವಿಂಡೀಸ್ ಕ್ರಿಕೆಟಿಗ ಡ್ವಾನೋ ಬ್ರಾವೋ ಪಕ್ಕಾ ಹೇಳಿಕೆ