Publish Date: Sun, 15 Dec 2019 (08:52 IST)
Updated Date: Sun, 15 Dec 2019 (08:54 IST)
ಚೆನ್ನೈ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಟಿ20 ಸರಣಿ ಮುಗಿದ ಬೆನ್ನಲ್ಲೇ ಇಂದಿನಿಂದ ಏಕದಿನ ಸರಣಿ ಆರಂಭವಾಗಲಿದ್ದು, ಮೊದಲ ಪಂದ್ಯ ಇಂದು ಚೆನ್ನೈನ ಚಿಪಾಕ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಈಗಾಗಲೇ ಟಿ20 ಸರಣಿ ಗೆದ್ದಿರುವ ಟೀಂ ಇಂಡಿಯಾಗೆ ಏಕದಿನ ಸರಣಿಯನ್ನೂ ತನ್ನದಾಗಿಸಿಕೊಳ್ಳುವ ಉತ್ಸಾಹವಿದೆ. ಆದರೆ ಭುವನೇಶ್ವರ್ ಕುಮಾರ್ ಮತ್ತು ಶಿಖರ್ ಧವನ್ ಅನುಪಸ್ಥಿತಿ ತಂಡಕ್ಕೆ ಕಾಡಬಹುದು. ಹಾಗಿದ್ದರೂ ಇವರಿಬ್ಬರೂ ಆಟಗಾರರ ಸ್ಥಾನ ತುಂಬಬಲ್ಲವರು ಇರುವುದರಿಂದ ಇದು ದೊಡ್ಡ ಹೊಡೆತವನ್ನೇನೂ ನೀಡದು ಎನ್ನಬಹುದು.
ಹಾಗಿದ್ದರೂ ವಿಂಡೀಸ್ ಬ್ಯಾಟಿಂಗ್ ಸಶಕ್ತವಾಗಿರುವುದರಿಂದ ಟೀಂ ಇಂಡಿಯಾ ದಾಂಡಿಗರು ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಿ ಉತ್ತಮ ಮೊತ್ತ ಕಲೆ ಹಾಕುವುದು ಮುಖ್ಯ. ಪಂದ್ಯ ಮಧ್ಯಾಹ್ನ 1.30 ಕ್ಕೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.