ಹೈದರಾಬಾದ್: ಕೆಎಲ್ ರಾಹುಲ್ ಇದುವರೆಗೆ ಫಾರ್ಮ್ ಕಂಡುಕೊಳ್ಳಲು ಹೆಣಗಾಡುತ್ತಿದ್ದರು. ಆದರೆ ಹೈದರಾಬಾದ್ ನಲ್ಲಿ ನಡೆದ ವಿಂಡೀಸ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ ನಲ್ಲಿ ಅವರಿಗೆ ಮರಳಿ ಫಾರ್ಮ್ ಕಂಡುಕೊಳ್ಳಲು ಸಹಾಯ ಮಾಡಿದ್ದು ಯಾರು ಗೊತ್ತೇ?
ದ್ವಿತೀಯ ಇನಿಂಗ್ಸ್ ನಲ್ಲಿ ಗೆಲುವಿಗೆ 72 ರನ್ ಗಳನ್ನು ಚೇಸ್ ಮಾಡುತ್ತಿದ್ದ ಭಾರತದ ಪರ ಆರಂಭಿಕರಗಿ ರಾಹುಲ್ ಜತೆಗೆ ಪೃಥ್ವಿ ಶಾ ಆಗಮಿಸಿದ್ದರು. ಸಾಮಾನ್ಯವಾಗಿ ಪೃಥ್ವಿ ಶಾ ಸೆಹ್ವಾಗ್ ರಂತೆ ಸ್ಪೋಟಕ ಆರಂಭ ನೀಡುತ್ತಾರೆ.
ಆದರೆ ಈ ಇನಿಂಗ್ಸ್ ನಲ್ಲಿ ಅವರು ಜತೆಗಾರನ ಪಾತ್ರ ನಿಭಾಯಿಸಿದರು. ಅದ್ಭುತ ಫಾರ್ಮ್ ನಲ್ಲಿರುವ ಶಾ ತಮ್ಮ ನೈಸರ್ಗಿಕ ಆಟವಾಡದೇ ನಿಧಾನಗತಿಯ ಆಟವಾಡಿ ಹೆಚ್ಚು ಬ್ಯಾಟಿಂಗ್ ನ್ನು ರಾಹುಲ್ ಗೇ ನೀಡಿದರು. ಈ ಮೂಲಕ ರಾಹುಲ್ ಗೆ ಹೆಚ್ಚು ಸಮಯ ಬೌಲರ್ ಗಳನ್ನು ಎದುರಿಸಲು ಅವಕಾಶ ಮಾಡಿಕೊಟ್ಟರು. ಅತ್ತ ರಾಹುಲ್ ಏಕದಿನ ಶೈಲಿಯಲ್ಲಿ ಬ್ಯಾಟ್ ಬೀಸಿ ಕೊಂಚ ಆತ್ಮವಿಶ್ವಾಸ ಕಂಡುಕೊಂಡರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.