Publish Date: Wed, 27 Apr 2022 (17:08 IST)
Updated Date: Wed, 27 Apr 2022 (17:09 IST)
ಮುಂಬೈ: ಐಪಿಎಲ್ ನಲ್ಲಿ ಕಳಪೆ ಫಾರ್ಮ್ ಮುಂದುವರಿಸಿರುವ ಕಿಂಗ್ ಕೊಹ್ಲಿ ಫಾರ್ಮ್ ಬಗ್ಗೆ ಈಗ ಭಾರೀ ಚರ್ಚೆ ಆರಂಭವಾಗಿದೆ.
ಟೀಂ ಇಂಡಿಯಾ ಮಾಜಿ ಕೋಚ್ ರವಿ ಶಾಸ್ತ್ರಿ, ಕೊಹ್ಲಿ ಕೆಲವು ಕಾಲ ಐಪಿಎಲ್ ನಿಂದ ವಿಶ್ರಾಂತಿ ಪಡೆಯುವುದು ಸೂಕ್ತ ಎಂದಿದ್ದಾರೆ.
ವಿರಾಟ್ ಕೊಹ್ಲಿ ಅಪ್ಪಟ ಅಭಿಮಾನಿಗಳೂ, ಮಾಜಿ ಕ್ರಿಕೆಟಿಗರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸತತ ಕ್ರಿಕೆಟ್ ನಿಂದ ಬಳಲಿರುವ ಕೊಹ್ಲಿ ಕೆಲವು ಕಾಲ ಸಕ್ರಿಯ ಕ್ರಿಕೆಟ್ ನಿಂದ ದೂರವಿದ್ದು ರಿಲ್ಯಾಕ್ಸ್ ಆಗುವುದು ಉತ್ತಮ ಎಂದು ಎಲ್ಲರೂ ಅಭಿಪ್ರಾಯಪಡುತ್ತಿದ್ದಾರೆ.