Webdunia - Bharat's app for daily news and videos

Install App

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

Sampriya
ಬುಧವಾರ, 16 ಏಪ್ರಿಲ್ 2025 (13:23 IST)
Photo Credit X
ನವದೆಹಲಿ: ನಿನ್ನೆಯ ಐಪಿಎಲ್‌ ಪಂದ್ಯಾಟದಲ್ಲಿ ತಮ್ಮ ಬಿರುಸಿನ ಬೌಲಿಂಗ್ ಮೂಲಕ ಪಂಜಾಬ್ ಕಿಂಗ್ಸ್ ಗೆಲುವಿಗೆ ಸ್ಪಿನ್ನರ್ ಯುಜ್ವೇಂದ್ರ ಚಹಾಲ್‌ ಪ್ರಮುಖ ಕಾರಣರಾದರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಚಾಹಲ್ ನಾಲ್ಕು ವಿಕೆಟ್ ಪಡೆದದ್ದಕ್ಕೂ ಸಾರ್ಥಕವಾಯಿತು ಎಂದು ಟ್ರೋಲ್ ಮಾಡಲಾಗುತ್ತಿದೆ.

ಇದಕ್ಕೆ ಕಾರಣ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ. ಆ ವಿಡಿಯೋದಲ್ಲಿ  ಕೆಕೆಆರ್ ವಿರುದ್ಧ ಗೆಲುವು ಸಾಧಿಸಿದ ಬಳಿಕ ಪಂಜಾಬ್ ಕಿಂಗ್ಸ್ ತಂಡದ ಮಾಲಕಿ ಪ್ರೀತಿ ಜಿಂಟಾ ಅವರು ಚಾಹಲ್ ಅವರನ್ನು ತಬ್ಬಿ ಅಭಿನಂದಿಸುತ್ತಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.

ಇದನ್ನು ನೋಡಿದ ನೆಟ್ಟಿಗರು ಚಾಹಲ್ ನಾಲ್ಕು ವಿಕೆಟ್ ಪಡೆದದ್ದಕ್ಕೂ ಸಾರ್ಥಕವಾಯಿತು ಎಂದಿದ್ದಾರೆ.

ಏಪ್ರಿಲ್ 15 ರಂದು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ಪಂಜಾಬ್ ಕಿಂಗ್ಸ್‌ ಅಚ್ಚರಿ ಗೆಲುವು ಪಡೆಯಿತು. ಇನ್ನೂ ಈ ಗೆಲುವಿಗೆ ಚಾಹಲ್ ಪ್ರಮುಖ ಕಾರಣರಾದರು. ನಾಲ್ಕು ವಿಕೆಟ್ ಪಡೆದ ಚಾಹಲ್‌ ಈ ಪಂದ್ಯಾಟದಲ್ಲಿ ಗಮನ ಸೆಳೆದರು.

ಚಹಲ್, ಈ ಋತುವಿನ ಮೊದಲ ಐದು ಪಂದ್ಯಗಳಲ್ಲಿ ಕೇವಲ ಎರಡು ವಿಕೆಟ್‌ಗಳನ್ನು ಪಡೆದಿದ್ದರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧದ ಕೊನೆಯ ಪಂದ್ಯದಲ್ಲಿ ಕೇವಲ ಒಂದು ಓವರ್ ಬೌಲ್ ಮಾಡಿದ್ದು, ಭಾರೀ ಚರ್ಚೆಗೂ ಕಾರಣವಾಯಿತು.

ನಾಲ್ಕು ಓವರ್‌ಗಳಲ್ಲಿ 4/28 ಎಂಬ ಅವರ ಅಂಕಿಅಂಶಗಳು KKR ಬ್ಯಾಟಿಂಗ್ ಲೈನ್-ಅಪ್‌ನಲ್ಲಿ ಆಘಾತಕಾರಿ ಕುಸಿತವನ್ನು ಉಂಟುಮಾಡಿತು, ಇದು ಕೇವಲ 95 ರನ್‌ಗಳಿಗೆ ಬೌಲ್ಡ್ ಆಗಿತ್ತು, ಒಂದು ಹಂತದಲ್ಲಿ ಕೈಯಲ್ಲಿ ಎಂಟು ವಿಕೆಟ್‌ಗಳೊಂದಿಗೆ 78 ಎಸೆತಗಳಲ್ಲಿ ಕೇವಲ 52 ರನ್‌ಗಳ ಅಗತ್ಯವಿತ್ತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಜೀವಬೆದರಿಕೆ ಬೆನ್ನಲ್ಲೇ ತಿರುಪತಿಗೆ ಟೀ ಇಂಡಿಯಾ ಕೋಚ್ ಭೇಟಿ, ಇಬ್ಬರು ಮಕ್ಕಳನ್ನು ಕೈಹಿಡಿದು ನಡೆದ ಗೌತಮ್ ಗಂಭೀರ್‌

ದೋಹಾ ಡೈಮಂಡ್‌ ಲೀಗ್‌ನಲ್ಲಿ ನೀರಜ್ ಚೋಪ್ರಾ ವಿರುದ್ಧ ಸ್ಪರ್ಧಿಸದ ಪಾಕ್‌ನ ಅರ್ಷದ್‌ ನದೀಮ್, ಕಾರಣ ಹೀಗಿದೆ

ಪಂದ್ಯ ನಿಂತ್ರು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಿರಾಕಲ್‌ಗೆ ಕೊಹ್ಲಿ ಅಭಿಮಾನಿಗಳು ಫುಲ್ ಖುಷ್‌, Video Viral

Bengaluru Rain: ಇಂದಿನ KKR vs RCB ಪಂದ್ಯಾಟದ ಟಿಕೆಟ್ ಖರೀದಿಸಿದವರಿಗೆ ಬಿಗ್ ಶಾಕ್‌

ಮುಂದಿನ ಸುದ್ದಿ
Show comments