ದುಬೈ: ಆಸ್ಟ್ರೇಲಿಯಾ ವಿರುದ್ಧ ರಾಂಚಿ ಏಕದಿನ ಪಂದ್ಯದಲ್ಲಿ ಆರ್ಮಿ ಕ್ಯಾಪ್ ಧರಿಸಿ ಆಡಲು ಐಸಿಸಿಯೇ ಟೀಂ ಇಂಡಿಯಾಗೆ ಒಪ್ಪಿಗೆ ನೀಡಿತ್ತು ಎಂದು ಸ್ಪಷ್ಟನೆ ನೀಡಿದರೂ ಪಾಕಿಸ್ತಾನಕ್ಕೆ ತೃಪ್ತಿಯಾಗಿಲ್ಲ.
ಪಾಕ್ ವಿದೇಶಾಂಗ ಸಚಿವರು ಮತ್ತು ಮಾಹಿತಿ ತಂತ್ರಜ್ಞಾನ ಸಚಿವರು ಟೀಂ ಇಂಡಿಯಾ ಆಟಗಾರರು ಮಿಲಿಟರಿ ಕ್ಯಾಪ್ ಧರಿಸಿ ಆಡುವ ಮೂಲಕ ಕ್ರೀಡೆಯಲ್ಲಿ ರಾಜಕೀಯ ಬೆರೆಸುತ್ತಿದ್ದಾರೆ ಎಂದು ಟ್ವಿಟರ್ ಮೂಲಕ ಆರೋಪಿಸಿದ್ದರು.
ಪಾಕ್ ಸಚಿವರ ಆರೋಪದ ಬಳಿಕ ಐಸಿಸಿ, ಹುತಾತ್ಮ ಯೋಧರಿಗೆ ನೆರವಾಗುವ ದೃಷ್ಟಿಯಿಂದ ಕ್ಯಾಪ್ ಧರಿಸಲು ಬಿಸಿಸಿಐ ಅನುಮತಿ ಕೇಳಿತ್ತು. ಹೀಗಾಗಿ ಒಪ್ಪಿಗೆ ಕೊಟ್ಟಿದ್ದೆವು ಎಂದು ಸ್ಪಷ್ಟನೆಯನ್ನೂ ನೀಡಿತ್ತು. ಆದರೆ ಈ ಸ್ಪಷ್ಟನೆಯಿಂದ ತೃಪ್ತರಾಗದ ಪಾಕಿಸ್ತಾನ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧಿಕಾರಿಗಳು ಐಸಿಸಿಗೆ ಪತ್ರ ಬರೆದಿದ್ದಾರೆ.
ಹಿಂದೆ ಇದೇ ರೀತಿ ಕ್ರಿಕೆಟ್ ನಲ್ಲಿ ರಾಜಕೀಯ ವಿಚಾರ ತಂದಿದ್ದಕ್ಕೆ ತಮ್ಮ ದೇಶದ ಕ್ರಿಕೆಟಿಗರಿಗೆ ಶಿಕ್ಷೆ ವಿಧಿಸಿದ್ದನ್ನು ನೆನಪಿಸಿರುವ ಪಾಕ್ ಕ್ರಿಕೆಟ್ ನಿಯಂತ್ರಣ ಮಂಡಳಿ ಇದೀಗ ಭಾರತದ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪತ್ರ ಬರೆದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ