ಇಸ್ಲಾಮಾಬಾದ್: ಪಾಕಿಸ್ತಾನದ ಜತೆ ಯಾವುದೇ ಕ್ರಿಕೆಟ್ ಟೂರ್ನಿಯಲ್ಲೂ ಆಡದೇ ಇರಲು ತೀರ್ಮಾನಿಸಿರುವ ಭಾರತದ ವಿರುದ್ಧ ಕತ್ತಿ ಮಸೆಯಲು ಪಾಕ್ ಕ್ರಿಕೆಟ್ ಮಂಡಳಿ ಹೊಸ ತಂತ್ರಕ್ಕೆ ಮೊರೆ ಹೋಗಿದೆ.
ಇದೇ ವರ್ಷ ಸೆಪ್ಟೆಂಬರ್ ನಲ್ಲಿ ಪಾಕಿಸ್ತಾನದಲ್ಲಿ ನಡೆಯಬೇಕಿರುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಪಾಲ್ಗೊಳ್ಳದೇ ಹೋದರೆ ನಾವೂ ಮುಂದಿನ ವರ್ಷ ಭಾರತದಲ್ಲಿ ನಡೆಯಬೇಕಿರುವ ಟಿ20 ವಿಶ್ವಕಪ್ ಗೆ ಬರಲ್ಲ ಎಂದು ಪಾಕ್ ಕ್ರಿಕೆಟ್ ಮಂಡಳಿ ಎಚ್ಚರಿಕೆ ನೀಡಿದೆ.
ಏಷ್ಯಾ ಕಪ್ ಆತಿಥ್ಯವನ್ನು ನಾವು ಯಾರಿಗೂ ಬಿಟ್ಟುಕೊಟ್ಟಿಲ್ಲ ಎಂದಿರುವ ಪಾಕ್ ಕ್ರಿಕೆಟ್ ಮಂಡಳಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಾಸಿಂ ಖಾನ್, ಏಷ್ಯಾ ಕಪ್ ಸ್ಥಳ ನಿಗದಿಪಡಿಸುವ ಮತ್ತು ಬದಲಾಯಿಸುವ ಹಕ್ಕು ಪಾಕ್ ಮಂಡಳಿ ಅಥವಾ ಐಸಿಸಿಗಿಲ್ಲ. ಇದನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ನಿರ್ಧರಿಸುತ್ತದೆ. ಅದರಂತೆ ನಾವು ಸದ್ಯಕ್ಕೆ ಏಷ್ಯಾ ಕಪ್ ಆಯೋಜಿಸಲು ಎರಡು ಸ್ಥಳಗಳನ್ನು ಗುರುತು ಹಾಕಿಕೊಂಡಿದ್ದೇವೆ. ಒಂದು ವೇಳೆ ಭಾರತಕ್ಕೆ ಏಷ್ಯಾ ಕಪ್ ಆಡಲು ಬಾರದೇ ಹೋದರೆ ನಾವೂ ಆ ದೇಶಕ್ಕೆ ಟಿ20 ವಿಶ್ವಕಪ್ ಆಡಲು ಹೋಗಲ್ಲ ಎಂದಿದ್ದಾರೆ. ಇದು ಮತ್ತೆ ಭಾರತ-ಪಾಕಿಸ್ತಾನ ಕ್ರಿಕೆಟ್ ಸಂಘರ್ಷಕ್ಕೆ ಕಾರಣವಾಗಲಿದೆ.