ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಕೂಟ ನಡೆಸಲು ಏಷ್ಯಾ ಕ್ರಿಕೆಟ್ ಕಪ್ ಟೂರ್ನಿ ರದ್ದು ಮಾಡಲ್ಲ ಬಿಡಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಎಹ್ಸಾನ್ ಮಣಿ ಎಚ್ಚರಿಸಿದ್ದಾರೆ.
ಈ ಬಾರಿ ಏಷ್ಯಾ ಕಪ್ ಕೂಟವನ್ನು ಪಾಕಿಸ್ತಾನ ಆಯೋಜಿಸುತ್ತಿದೆ. ಒಂದು ವೇಳೆ ಐಪಿಎಲ್ ಗಾಗಿ ಏಷ್ಯಾ ಕಪ್ ರದ್ದು ಮಾಡಿದರೆ ಅದು ಪಾಕಿಸ್ತಾನಕ್ಕೆ ನಷ್ಟ ತಂದೊಡ್ಡಲಿದೆ.
ಕೊರೋನಾದಿಂದಾಗಿ ಐಪಿಎಲ್ ಆರಂಭಿಸಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಐಪಿಎಲ್ ರದ್ದಾದರೆ ಬಿಸಿಸಿಐ ಭಾರೀ ನಷ್ಟ ಹೊರಬೇಕಾಗುತ್ತದೆ. ಹೀಗಾಗಿ ಏಷ್ಯಾ ಕಪ್ ರದ್ದು ಮಾಡಿ ಐಪಿಎಲ್ ಆಯೋಜಿಸಬೇಕು ಎಂಬ ವದಂತಿ ಹಬ್ಬಿತ್ತು. ಇದಕ್ಕೆ ಪಾಕಿಸ್ತಾನ ಈಗಲೇ ಎಚ್ಚರಿಕೆ ನೀಡಿದೆ.