Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಫಿಟ್ ಆಗಿದ್ದರೆ ಮಾತ್ರ ಪಾಕ್ ಕ್ರಿಕೆಟಿಗರಿಗೆ ಸಂಬಳ!

ಫಿಟ್ ಆಗಿದ್ದರೆ ಮಾತ್ರ ಪಾಕ್ ಕ್ರಿಕೆಟಿಗರಿಗೆ ಸಂಬಳ!
ಇಸ್ಲಾಮಾಬಾದ್ , ಶನಿವಾರ, 4 ಜನವರಿ 2020 (11:08 IST)
ಇಸ್ಲಾಮಾಬಾದ್: ಇಷ್ಟು ದಿನ ಫಿಟ್ನೆಸ್ ಬಗ್ಗೆ ತಲೆಯೇ ಕೆಡಿಸಿಕೊಳ್ಳದೆ ಬೇಕಾಬಿಟ್ಟಿ ಇದ್ದ ಪಾಕಿಸ್ತಾನ ಕ್ರಿಕೆಟಿಗರಿಗೆ ಚಾಟಿ ಬೀಸಲು ಅಲ್ಲಿನ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ.


ಪಾಕಿಸ್ತಾನದಲ್ಲಿ ಕ್ರಿಕೆಟ್ ಸುಧಾರಣೆಗೆ ಕ್ರಮ ಕೈಗೊಳ್ಳುತ್ತಿರುವ ಪಿಸಿಬಿ ಇನ್ನು ಮುಂದೆ ಫಿಟ್ನೆಸ್ ಇಲ್ಲದ ಕ್ರಿಕೆಟಿಗರ ವೇತನಕ್ಕೆ ಕತ್ತರಿ ಹಾಕಲು ತೀರ್ಮಾನಿಸಿದೆ. ಇದಕ್ಕಾಗಿ ಮುಂದಿನ ವಾರದಿಂದ ಗುತ್ತಿಗೆ ಪಡೆದ ಆಟಗಾರರ ಫಿಟ್ನೆಸ್ ಪರೀಕ್ಷೆ ನಡೆಸಲಿದೆ.

ಫಿಟ್ನೆಸ್ ಇಲ್ಲದ ಕ್ರಿಕೆಟಿಗರ ವೇತನದ ಶೇ.15 ರಷ್ಟು ಕಡಿತಗೊಳಿಸಲಾಗುತ್ತದೆ. ಎಲ್ಲಿಯವರೆಗೆ ಅವರು ಫಿಟ್ ಆಗುವುದಿಲ್ಲವೋ ಅಲ್ಲಿಯವರೆಗೆ ಈ ವೇತನ ಕಡಿತ ಜಾರಿಯಲ್ಲಿರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಲಂಕಾ ಪಂದ್ಯಕ್ಕೆ ಬ್ಯಾನರ್ ಕೊಂಡೊಯ್ಯುವಂತಿಲ್ಲ