ಗುವಾಹಟಿ: ಭಾರತ ಮತ್ತು ಶ್ರೀಲಂಕಾ ನಡುವೆ ನಾಳೆ ಅಸ್ಸಾಂನ ಗುವಾಹಟಿಯಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದ್ದು, ಭದ್ರತೆ ಬಿಗಿ ಏರ್ಪಡಿಸಲಾಗಿದೆ.
ಅಸ್ಸಾಂನಲ್ಲಿ ಪೌರತ್ವ ಖಾಯಿದೆ ಪ್ರತಿಭಟನೆಗಳು ಜೋರಾಗಿತ್ತು. ಇದರಿಂದಾಗಿ ರಾಜ್ಯದಲ್ಲಿ ಉದ್ವಿಗ್ನ ಪರಿಸ್ಥಿತಿಯಿತ್ತು. ಹೀಗಾಗಿ ಪಂದ್ಯ ನಡೆಯುವಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.
ಹೀಗಾಗಿ ನಾಳೆಯ ಪಂದ್ಯಕ್ಕೆ ಬ್ಯಾನರ್, ಪೋಸ್ಟರ್ ಗಳು ಹಾಗೂ ಮತ್ತಿತರ ವಸ್ತುಗಳನ್ನು ಮೈದಾನಕ್ಕೆ ತರುವುದನ್ನು ನಿಷೇಧಿಸಲಾಗಿದೆ. ಅಷ್ಟೇ ಅಲ್ಲ ಬೌಂಡರಿ, ಸಿಕ್ಸರ್ ಪ್ರತಿನಿಧಿಸುವ ಪ್ಲೇಕಾರ್ಡ್ ಗಳನ್ನೂ ತರುವಂತಿಲ್ಲ. ಪರ್ಸ್, ಮೊಬೈಲ್ ಫೋನ್ ಮತ್ತು ವಾಹನದ ಕೀ ಮಾತ್ರ ಮೈದಾನದೊಳಕ್ಕೆ ಕೊಂಡೊಯ್ಯಲು ಅನುಮತಿಸಲಾಗಿದೆ.