Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವೀಸಾ ಕೊಡದಿದ್ದರೆ ವಿಶ್ವಕಪ್ ಭಾರತದಲ್ಲಿ ನಡೆಯೋದು ಬೇಡ: ಪಾಕ್ ಮಂಡಳಿ

ವೀಸಾ ಕೊಡದಿದ್ದರೆ ವಿಶ್ವಕಪ್ ಭಾರತದಲ್ಲಿ ನಡೆಯೋದು ಬೇಡ: ಪಾಕ್ ಮಂಡಳಿ
ದುಬೈ , ಸೋಮವಾರ, 1 ಮಾರ್ಚ್ 2021 (09:05 IST)
ದುಬೈ: ಒಂದು ವೇಳೆ ನಮ್ಮ ಕ್ರಿಕೆಟಿಗರು, ಅಭಿಮಾನಿಗಳಿಗೆ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಕೂಟದಲ್ಲಿ ಭಾಗವಹಿಸಲು ವೀಸಾ ಸಿಗುತ್ತದೆಂದು ಬಿಸಿಸಿಐ ಲಿಖಿತ ಭರವಸೆ ನೀಡದೇ ಹೋದಲ್ಲಿ ಐಸಿಸಿ ಟೂರ್ನಮೆಂಟ್ ನ್ನು ಸ್ಥಳಾಂತರಿಸಲಿ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಗ್ರಹಿಸಿದೆ.


ಭಾರತ ಈ ತಿಂಗಳ ಅಂತ್ಯಕ್ಕೆ ಲಿಖಿತ ಭರವಸೆ ನೀಡಬೇಕು. ಇಲ್ಲದೇ ಹೋದಲ್ಲಿ ಐಸಿಸಿ, ಟಿ20 ವಿಶ್ವಕಪ್ ನ್ನು ಯುಎಇಗೆ ಸ್ಥಳಾಂತರಿಸಲಿ ಎಂದು ಪಾಕ್ ಕ್ರಿಕೆಟ್ ಮಂಡಳಿ ಆಗ್ರಹಿಸಿದೆ. ಭಾರತ ಡಿಸೆಂಬರ್ ಅಂತ್ಯದೊಳಗಾಗಿ ನಮಗೆ ಭರವಸೆ ನೀಡಬೇಕಿತ್ತು. ಆದರೆ ಇನ್ನೂ ಈ ಕುರಿತು ಸ್ಪಷ್ಟನೆ ನೀಡಿಲ್ಲ. ಭಾರತದಲ್ಲಿ ಟೂರ್ನಮೆಂಟ್ ಆಯೋಜಿಸುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ನಮ್ಮ ಕ್ರಿಕೆಟಿಗರಿಗೆ, ಅಭಿಮಾನಿಗಳಿಗೆ ಅಲ್ಲಿಗೆ ಹೋಗಲು ವೀಸಾ ಸಮಸ್ಯೆಯಾಗಬಾರದು ಎಂದು ಪಾಕ್ ಆಗ್ರಹಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾದಲ್ಲೀಗ ಹಾರ್ದಿಕ್ ಪಾಂಡ್ಯ ವರ್ಸಸ್ ಉಮೇಶ್ ಯಾದವ್