ಕರಾಚಿ: ಒಂದು ವೇಳೆ ಈ ಬಾರಿ ಟಿ20 ವಿಶ್ವಕಪ್ ಫೈನಲ್ ನಲ್ಲಿ ಟೀಂ ಇಂಡಿಯಾವನ್ನು ಜಿಂಬಾಬ್ವೆ ತಂಡ ಫೈನಲ್ ನಲ್ಲಿ ಸೋಲಿಸಿದರೆ ತಾವು ಜಿಂಬಾಬ್ವೆ ಹುಡುಗನನ್ನೇ ಮದುವೆಯಾಗುವುದಾಗಿ ಪಾಕ್ ನಟಿ ಸೆಹರ್ ಶಿನ್ವಾರಿ ಪ್ರತಿಜ್ಞೆ ಮಾಡಿದ್ದಾರೆ.
ಸಾಮಾನ್ಯವಾಗಿ ವಿಶ್ವಕಪ್ ವೇಳೆ ಕೆಲವು ನಟಿಮಣಿಯರು ಇಂತಹ ಹೇಳಿಕೆ ನೀಡುವುದು ಸಹಜ. ಪಾಕ್ ನಟಿಯ ಈ ಹೇಳಿಕೆ ಈಗ ವೈರಲ್ ಆಗಿದೆ.
ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಜಿಂಬಾಬ್ವೆ ವಿರುದ್ಧ 1 ರನ್ ನಿಂದ ಸೋತಿತ್ತು. ಇದರ ಬೆನ್ನಲ್ಲೇ ಪಾಕ್ ನಟಿ ಇಂತಹದ್ದೊಂದು ಟ್ವೀಟ್ ಮಾಡಿ ಗಮನ ಸೆಳೆದಿದ್ದಾರೆ.
-Edited by Rajesh Patil