ಇಂಧೋರ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಅಂಪಾಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ನಿತಿನ್ ಮೆನನ್ ಮತ್ತೆ ಟೀಕೆಗೆ ಗುರಿಯಾಗಿದ್ದಾರೆ.
ಎರಡನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ವಿರುದ್ಧ ತಪ್ಪಾಗಿ ಔಟ್ ಎಂದು ತೀರ್ಪಿತ್ತು ಟೀಕೆಗೊಳಗಾಗಿದ್ದ ನಿತಿನ್ ಮೆನನ್ ಈ ಬಾರಿ ರೋಹಿತ್ ಶರ್ಮಾ ಔಟಾಗಿದ್ದರೂ ಔಟ್ ತೀರ್ಪು ನೀಡದೇ ಟ್ರೋಲ್ ಗೊಳಗಾಗಿದ್ದಾರೆ.
ಮೊದಲ ಓವರ್ ನ ಮೊದಲ ಎಸೆತದಲ್ಲೇ ರೋಹಿತ್ ಬ್ಯಾಟ್ ಸವರಿಕೊಂಡು ಬಾಲ್ ಕೀಪರ್ ಕೈ ಸೇರಿತ್ತು. ಆಸ್ಟ್ರೇಲಿಯನ್ನರು ಔಟ್ ಗೆ ಮನವಿ ಸಲ್ಲಿಸಿದರು. ಆದರೆ ಅಂಪಾಯರ್ ನಿತಿನ್ ಮೆನನ್ ಔಟ್ ನೀಡಲಿಲ್ಲ. ಇದರ ವಿರುದ್ಧ ಆಸೀಸ್ ಡಿಆರ್ ಎಸ್ ಗೂ ಮನವಿ ಸಲ್ಲಿಸಲಿಲ್ಲ. ಆದರೆ ರಿಪ್ಲೇನಲ್ಲಿ ನೋಡಿದಾಗ ಬ್ಯಾಟ್ ಗೆ ಬಾಲ್ ಸವರಿದ್ದು ಗೊತ್ತಾಗಿತ್ತು. ಇದರಿಂದಾಗಿ ರೋಹಿತ್ ಬಚಾವ್ ಆದರು. ನಿತಿನ್ ಮೆನನ್ ಮತ್ತೆ ಕಳಪೆ ಅಂಪಾಯರಿಂಗ್ ನಿಂದ ಟೀಕೆಗೊಳಗಾದರು.