Webdunia - Bharat's app for daily news and videos

Install App

ಕಾನ್ಪುರ ಟೆಸ್ಟ್: ಟೀಂ ಇಂಡಿಯಾ ಸ್ಪಿನ್ನರ್ ಗಳಿಗೂ ಜಗ್ಗದ ಕಿವೀಸ್

Webdunia
ಶುಕ್ರವಾರ, 26 ನವೆಂಬರ್ 2021 (16:47 IST)
ಕಾನ್ಪುರ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ನ್ಯೂಜಿಲೆಂಡ್ ಎರಡನೇ ದಿನದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 129 ರನ್ ಗಳಿಸಿದೆ.

ಭಾರತ ಮೊದಲ ಇನಿಂಗ್ಸ್ ನಲ್ಲಿ 345 ರನ್ ಗೆ ಆಲೌಟ್ ಆಗಿತ್ತು. ಈ ಮೊತ್ತವನ್ನು ಬೆನ್ನತ್ತಿರುವ ಕಿವೀಸ್ ಇದುವರೆಗೆ ಅದ್ಭುತ ಬ್ಯಾಟಿಂಗ್ ನಡೆಸಿದೆ. ಆರಂಭಿಕ ಯುಂಗ್ 75 ಮತ್ತು ಲಾಥಮ್ 50 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಈ ಮೂಲಕ ನ್ಯೂಜಿಲೆಂಡ್ ಬ್ಯಾಟ್ಸ್ ಮನ್ ಗಳು ಇದೇ ಮೊದಲ ಬಾರಿಗೆ ಭಾರತೀಯ ನೆಲದಲ್ಲಿ ಆರಂಭಿಕ ವಿಕೆಟ್ ಗೆ ಗರಿಷ್ಠ ರನ್ ಜೊತೆಯಾಟವಾಡಿದ್ದಾರೆ.

ಸಾಮಾನ್ಯವಾಗಿ ಯಾವುದೇ ಪ್ರವಾಸೀ ತಂಡವೂ ಭಾರತೀಯ ನೆಲದಲ್ಲಿ ಸ್ಪಿನ್ನರ್ ಗಳನ್ನು ಎದುರಿಸಲು ಪರದಾಡುತ್ತಾರೆ. ಆದರೆ ಕಿವೀಸ್ ಬ್ಯಾಟ್ಸ್ ಮನ್ ಗಳು ಸ್ಪಿನ್ನರ್ ಗಳ ದಾಳಿಗೂ ಕ್ಯಾರೇ ಎಂದಿಲ್ಲ. ಇದ್ದವರಲ್ಲಿ ರವಿಚಂದ್ರನ್ ಅಶ್ವಿನ್ ವಾಸಿ. ಆದರೆ ಅವರಿಂದಲೂ ವಿಕೆಟ್ ಕೀಳಲು ಸಾಧ್ಯವಾಗಿಲ್ಲ. ಇದೀಗ ಕಿವೀಸ್ ಭಾರತದ ಮೊದಲ ಇನಿಂಗ್ಸ್ ಮುನ್ನಡೆ ದಾಟಲು 216 ರನ್ ಗಳಿಸಿದರೆ ಸಾಕು. 

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಿದ ಶಿಲ್ಪಾಗೆ ಬಂಪರ್ ಬಹುಮಾನ

ಪದೇ ಪದೇ ಆಟಗಾರರಿಗೆ ಗಾಯ, ಫಿಟ್ನೆಸ್ ವಿಚಾರಕ್ಕೆ ಬಿಸಿಸಿಐ ಅಸಮಾಧಾನ

ರೋಹಿತ್ ಶರ್ಮಾರನ್ನು ಹೊರಹಾಕ್ತೀನಿ ಎಂದು ಅಜಿತ್ ಅಗರ್ಕರ್ ಗೆ ತಾನೇ ನಡೆಯುವ ಪರಿಸ್ಥಿತಿ: ಟ್ರೋಲ್

ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಹೊಸ ಇನಿಂಗ್ಸ್‌ ಆರಂಭಿಸಿದ ಭಾರತದ ಮಾಜಿ ವೇಗಿ ಜಹೀರ್ ಖಾನ್

ಮುಂದಿನ ಸುದ್ದಿ
Show comments