Publish Date: Wed, 16 Mar 2022 (17:10 IST)
Updated Date: Wed, 16 Mar 2022 (17:12 IST)
ಬೇ ಓವಲ್: ಇಂಗ್ಲೆಂಡ್ ವಿರುದ್ಧ ಇಂದು ನಡೆದ ಮಹಿಳಾ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡ ಹೋರಾಡಿ ಸೋಲುಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಬ್ಯಾಟಿಂಗ್ ಕೈ ಕೊಟ್ಟಿತ್ತು. ಹೀಗಾಗಿ 134 ರನ್ ಗಳಿಗೇ ಆಲೌಟ್ ಆಯಿತು. ಪ್ರಬಲ ಇಂಗ್ಲೆಂಡ್ ಈ ಮೊತ್ತ ದಾಟುವುದು ಸುಲಭವೆಂದೇ ಎಲ್ಲರೂ ಅಂದುಕೊಂಡಿದ್ದರು.
ಆದರೆ ಭಾರತೀಯ ಬೌಲರ್ ಗಳು ಅಷ್ಟು ಬೇಗ ಗೆಲುವು ಬಿಟ್ಟುಕೊಡಲಿಲ್ಲ. ಆರಂಭಿಕರನ್ನು ಬೇಗನೇ ಪೆವಿಲಿಯನ್ ಗೆ ಕಳುಹಿಸಿದ ಭಾರತೀಯರಿಗೆ ಮಧ‍್ಯಮ ಕ್ರಮಾಂಕ ಕಂಟಕವಾಯಿತು. ನಾಯಕಿ ಹೀತರ್ ವೈಟ್ ಅಜೇಯ 53,ನತಾಲಿ ಸಿವರ್ 45 ರನ್ ಗಳಿಸಿ ಕಾಡಿದರು. ಅಂತಿಮವಾಗಿ ಇಂಗ್ಲೆಂಡ್ 31.2 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಿತು. ಭಾರತದ ಪರ ಉತ್ತಮ ದಾಳಿ ಸಂಘಟಿಸಿದ ಮೇಘನಾ ಸಿಂಗ್ 3 ವಿಕೆಟ್ ಪಡೆದರೆ ಜೂಲಾನ್ ಗೋಸ್ವಾಮಿ, ರಾಜೇಶ್ವರಿ ಗಾಯಕ್ ವಾಡ್ ಮತ್ತು ಪೂಜಾ ವಸ್ತ್ರಾಕರ್ ತಲಾ 1 ವಿಕೆಟ್ ತಮ್ಮದಾಗಿಸಿಕೊಂಡರು. ಒಂದು ವೇಳೆ ಇನ್ನೂ 50-60 ರನ್ ಗಳಿಸಿದ್ದರೆ ಭಾರತಕ್ಕೆ ಗೆಲ್ಲುವ ಅವಕಾಶವಿತ್ತು. ಆದರೆ ಈಗ ಈ ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.