ರಣಜಿ ಟ್ರೋಫಿ ಕ್ರಿಕೆಟ್: ತ್ರಿಶತಕ ಬಾರಿಸಿದ ಕನ್ನಡಿಗ ಮಯಾಂಕ್

Webdunia
ಶುಕ್ರವಾರ, 3 ನವೆಂಬರ್ 2017 (13:35 IST)
ಪುಣೆ: ಮಹಾರಾಷ್ಟ್ರ ವಿರುದ್ಧ ರಣಜಿ ಕ್ರಿಕೆಟ್ ಪಂದ್ಯದಲ್ಲಿ ಕರ್ನಾಟಕದ ಮಯಾಂಕ್ ಅಗರ್ವಾಲ್ ಭರ್ಜರಿ ಶತಕ ಗಳಿಸಿದ್ದು ರಾಜ್ಯ ತಂಡ ಬೃಹತ್ ಮೊತ್ತ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ.

 
ಮಹಾರಾಷ್ಟ್ರ ಮೊದಲ ಇನಿಂಗ್ಸ್ ನಲ್ಲಿ ಕೇವಲ 245 ರನ್ ಗಳಿಸಿತ್ತಷ್ಟೇ. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ 5 ವಿಕೆಟ್ ನಷ್ಟಕ್ಕೆ 628 ರನ್ ಗಳಿಸಿದ್ದು 383 ರನ್ ಗಳ ಬೃಹತ್ ಮುನ್ನಡೆ ಸಾಧಿಸಿದೆ.

ಕರ್ನಾಟಕದ ಪರ ತ್ರಿಶತಕ ಸಿಡಿಸಿದ ಮಯಾಂಕ್ ಅಗರ್ವಾಲ್ 494 ಬಾಲ್ ಗಳಲ್ಲಿ ಅಜೇಯವಾಗಿ 304 ರನ್ ಗಳಿಸಿದರು.  ಅವರ ಈ ಮ್ಯಾರಥಾನ್ ಇನಿಂಗ್ಸ್ ನಲ್ಲಿ 28 ಬೌಂಡರಿ ಮತ್ತು 4 ಸಿಕ್ಸರ್ ಇತ್ತು. ಇದರೊಂದಿಗೆ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ತ್ರಿಶತಕ ಭಾರಿಸಿದ ಕರ್ನಾಟಕದ ಮೂರನೇ ಮತ್ತು ಭಾರತದ 43 ನೇ ಬ್ಯಾಟ್ಸ್ ಮನ್ ಎಂಬ ದಾಖಲೆಗೆ ಪಾತ್ರರಾದರು. ಅವರು ತ್ರಿಶತಕ ಗಳಿಸುತ್ತಿದ್ದಂತೇ ಸಹ ಆಟಗಾರರು ಪೆವಿಲಿಯನ್ ನಲ್ಲಿ ಕುಣಿದಾಡಿಬಿಟ್ಟರು. ಇದರ ಬೆನ್ನಲ್ಲೇ ನಾಯಕ ವಿನಯ್ ಕುಮಾರ್ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

T20 WC: ಕಿವೀಸ್‌ ತಂಡವನ್ನು ಬಗ್ಗುಬಡಿದು ಸೂಪರ್‌ ಎಂಟರ ಘಟ್ಟಕ್ಕೆ ಲಗ್ಗೆ ಹಾಕಿದ ದಕ್ಷಿಣ ಆಫ್ರಿಕಾ

T20 WC: ವಿಶ್ವವೇ ಕಾದುನೋಡುತ್ತಿರುವ ಹೈವೋಲ್ಟೇಜ್‌ ಪಂದ್ಯಕ್ಕೆ ಶುರುವಾಗಿದೆ ಈ ಭೀತಿ

ಪಾಕ್‌ ಆಟಗಾರರ ಜತೆಗೆ ಶೇಕ್‌ಹ್ಯಾಂಡ್ ಬಗ್ಗೆ ಸೂರ್ಯಕುಮಾರ್‌ ಶಾಕಿಂಗ್ ಹೇಳಿಕೆ

ಟೀಂ ಇಂಡಿಯಾದ ಯಾವ ಕ್ರಿಕೆಟಿಗರಿಗೂ, ಪತ್ನಿಯರಿಗೂ ಇಲ್ಲದ ಭಾಗ್ಯ ಜಸ್ಪ್ರೀತ್ ಬುಮ್ರಾಗಿದೆ: ಏನದು video ನೋಡಿ

ಕೊಲೊಂಬೋದಲ್ಲಿ ಟೀಂ ಇಂಡಿಯಾಗೆ ಏನು ಅಬ್ಬರದ ಸ್ವಾಗತ, ಪಾಕಿಸ್ತಾನವನ್ನು ಕೇಳೋರೇ ಇಲ್ಲ: ಫುಲ್ ಟ್ರೋಲ್ video

ಮುಂದಿನ ಸುದ್ದಿ
Show comments