ನವದೆಹಲಿ: ಜಾಗತಿಕ ಕ್ರಿಕೆಟ್ ಬಾಲ್ ವಿರೂಪ ಪ್ರಕರಣದಿಂದ ಹೊರ ಬರುವ ಮೊದಲೇ ಟೀಂ ಇಂಡಿಯಾ ಕ್ರಿಕೆಟಿಗರೊಬ್ಬರ ಮ್ಯಾಚ್ ಫಿಕ್ಸಿಂಗ್ ಆರೋಪದ ಸುದ್ದಿಯಿಂದ ಬೆಚ್ಚಿ ಬಿದ್ದಿದೆ.
2011 ರ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರಾಗಿದ್ದ ವೇಗಿ ಮುನಾಫ್ ಪಟೇಲ್ ಮೇಲೆ ರಜಪೂತ್ ಲೀಗ್ ಕ್ರಿಕೆಟ್ ನಲ್ಲಿ ಫಿಕ್ಸಿಂಗ್ ನಲ್ಲಿ ಭಾಗಿಯಾದ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಇದೀಗ ಬಿಸಿಸಿಐ ತನಿಖೆಗೂ ಮುಂದಾಗಿದೆ.
ಆದರೆ ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಮುನಾಫ್ ಈ ಆರೋಪಗಳೆಲ್ಲಾ ನಿರಾಧಾರ. ದೇಶ ಮತ್ತು ಐಪಿಎಲ್ ನಂತಹ ದೊಡ್ಡ ಟೂರ್ನಿಗಳಲ್ಲಿ ಆಡಿದ ನಾನು, ಇಂತಹ ಸಣ್ಣ ಪುಟ್ಟ ಲೀಗ್ ಗಳೆಲ್ಲೆಲ್ಲಾ ಫಿಕ್ಸಿಂಗ್ ವ್ಯವಹಾರ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ಅದೇನೇ ಇರಲಿ ಇದೀಗ ವಿಚಾರಣೆ ನಡೆಯುತ್ತಿದ್ದು, ನಂತರವಷ್ಟೇ ಸ್ಪಷ್ಟ ವಿಚಾರ ತಿಳಿಯಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.