Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸರಣಿ ಜಯದ ಕನಸಿನಲ್ಲಿ ಭಾರತ, ಶ್ರೀಲಂಕಾಕ್ಕೆ ಮಾಡು ಇಲ್ಲವೇ ಮಡಿ ಪರಿಸ್ಥಿತಿ

ಸರಣಿ ಜಯದ ಕನಸಿನಲ್ಲಿ ಭಾರತ, ಶ್ರೀಲಂಕಾಕ್ಕೆ ಮಾಡು ಇಲ್ಲವೇ ಮಡಿ ಪರಿಸ್ಥಿತಿ

ramkrishna puranik

ಬೆಂಗಳೂರು , ಶುಕ್ರವಾರ, 22 ಡಿಸೆಂಬರ್ 2017 (13:48 IST)
ಮೊದಲ ಟಿ20 ಪಂದ್ಯದ ಗೆಲುವಿನ ಉತ್ಸಾಹದಲ್ಲಿರುವ ಭಾರತ ಕ್ರಿಕೆಟ್ ತಂಡವು, ಇಂದು ಇಂಧೋರ್‌ನಲ್ಲಿ ಪ್ರವಾಸಿ ಶ್ರೀಲಂಕಾ ತಂಡದೊಂದಿಗೆ ಎರಡನೆಯ ಟಿ20 ಪಂದ್ಯ ಆಡಲು ಸಜ್ಜಾಗಿದ್ದು, ಎರಡನೇ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿ ಕೈವಶ ಮಾಡಿಕೊಳ್ಳುವ ಇರಾದೆ ಹೊಂದಿದೆ.
ಪ್ರವಾಸಿ ಶ್ರೀಲಂಕಾ ವಿರುದ್ಧ ಆಡಿದ ಟೆಸ್ಟ್ ಹಾಗೂ ಏಕದಿನ ಸರಣಿಗಳನ್ನು ಗೆದ್ದಿರುವ ಭಾರತ ತಂಡ, ಇಂದಿನ ಪಂದ್ಯದಲ್ಲಿ ಲಂಕಾವನ್ನು ಬಗ್ಗು ಬಡಿಯುವ ಮೂಲಕ ಮೂರು ಸರಣಿಗಳನ್ನು ಕೈವಶ ಮಾಡಿಕೊಳ್ಳುವ ಭರವಸೆ ಹೊಂದಿದೆ. ಚೊಚ್ಚಲ ಅಂತರರಾಷ್ಟ್ರೀಯ ಟಿ20 ಪಂದ್ಯವನ್ನು ಆಯೋಜಿಸಿರುವ ಇಂಧೋರ್‌ನ ಹೋಳ್ಕರ್ ಕ್ರೀಡಾಂಗಣ ಇಂದಿನ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಈ ಕ್ರೀಡಾಂಗಣ ಚೇಸಿಂಗ್ ಮಾಡಲು ಸೂಕ್ತವಾಗಿದೆ ಎಂದು ಪಿಚ್ ಕ್ಯುರೇಟರ್ ಹೇಳಿದ್ದಾರೆ.
 
ಕಟಕ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಧೋನಿ ಹಾಗೂ ಕನ್ನಡಿಗರಾದ ಕೆ ಎಲ್ ರಾಹುಲ್ ಮತ್ತು ಮನೀಷ್ ಪಾಂಡೆ ಅವರ ದಿಟ್ಟ ಬ್ಯಾಟಿಂಗ್, ಅದರೊಂದಿಗೆ ಚಾಹಲ್ ಹಾಗೂ ಕುಲದೀಪ್ ಸ್ಪಿನ್ ಜೋಡಿಯ ಕರಾರುವಾಕ್ಕಾದ ಬೌಲಿಂಗ್ ನೆರವಿನಿಂದ ಗೆಲುವನ್ನು ಸಾಧಿಸಿರುವ ಭಾರತ ತಂಡ, ಇಂದು ಕೂಡಾ ಅದೇ ತಂಡವನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಈ ಪಂದ್ಯವನ್ನು ಭಾರತ ಗೆದ್ದಲ್ಲಿ ಐಸಿಸಿ ರ್‍ಯಾಂಕಿಂಗ್‌ನಲ್ಲಿ 2ನೇ ಸ್ಥಾನಕ್ಕೆ ಬಡ್ತಿ ಪಡೆಯುವ ಅವಕಾಶವನ್ನು ಹೊಂದಿದೆ. ಅದೇ ರೀತಿ ಸರಣಿಯನ್ನು 3-0 ಯಿಂದ ವೈಟ್‌ವಾಷ್ ಮಾಡಿದಲ್ಲಿ 2ನೇ ಸ್ಥಾನವನ್ನು ಉಳಿಸಿಕೊಳ್ಳಲಿದೆ.
 
ಮೊದಲನೇ ಚುಟುಕು ಪಂದ್ಯ ಸೋತ ಶ್ರೀಲಂಕಾ ತಂಡ ಏರಡನೇ ಪಂದ್ಯವನ್ನು ಗೆದ್ದು ಸರಣಿ ಜೀವಂತವಾಗಿರಿಕೊಳ್ಳುವ ತವಕದಲ್ಲಿದೆ. ಹೀಗಾಗಿ ಈ ಪಂದ್ಯ ಶ್ರೀಲಂಕಾ ಪಾಲಿಗೆ ಮಾಡುವ ಇಲ್ಲವೇ ಮಡಿ ಸ್ಥಿತಿಯನ್ನು ಸೃಷ್ಟಿಸಿದೆ.
 
ಪಂದ್ಯ ಆರಂಭ: ಸಂಜೆ 7.00
ನೇರ ಪ್ರಸಾರ: ಸ್ಟಾರ್‌ಸ್ಪೋಟ್ಸ್

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಮನೀಶ್ ಪಾಂಡೆಗೆ ತೊಂದರೆ ಕೊಟ್ಟ ಕ್ಯಾಮರಾ ಮೆನ್ ಗೆ ಧೋನಿ ಮಾಡಿದ್ದೇನು?!