ದುಬೈ: ದುಬೈನಲ್ಲಿ ನಡೆಯುತ್ತಿರುವ ಐಸಿಸಿ ಸಭೆಯಲ್ಲಿ ಕ್ರಿಕೆಟ್ ಕುರಿತಂತೆ ಹಲವು ಮಹತ್ವದ ನಿರ್ಧಾರಗಳು ಹೊರ ಬೀಳುವ ಸಾಧ್ಯತೆಯಿದೆ. ಇನ್ನೊಂದೆಡೆ ಜೂನ್ ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ನಿಂದ ಭಾರತ ಹಿಂದೆ ಸರಿಯುವ ಸಾಧ್ಯತೆಯಿದೆ ಎನ್ನಲಾಗಿದೆ.
ಟೆಸ್ಟ್ ಮತ್ತು ಏಕದಿನ ಪಂದ್ಯಗಳನ್ನು ಇನ್ನಷ್ಟು ಆಸಕ್ತಿದಾಯಕವಾಗಿಸಲು ಐಸಿಸಿಯ ಕಾರ್ಯನಿರ್ವಾಹಕ ಸಮಿತಿ ಹಲವು ಸುಧಾರಣೆಗಳನ್ನು ತರಲು ಉದ್ದೇಶಿಸಿದೆ. ಫುಟ್ ಬಾಲ್ ನಂತಹ ಕ್ರೀಡೆಗಳಲ್ಲಿರುವಂತೆ ಟೆಸ್ಟ್ ಟೈ ಲೀಗ್ ಗಳನ್ನು ಜಾರಿಗೊಳಿಸುವ ಇಂಗಿತ ಐಸಿಸಿಗಿದೆ.
ಅಲ್ಲದೆ ಪ್ರಮುಖವಾಗಿ ಹೊಸ ಹಣಕಾಸು ವ್ಯವಸ್ಥೆಯನ್ನು ಅಳವಡಿಸುವ ಬಗ್ಗೆ ಚಿಂತನೆ ನಡೆಸಿದೆ. ಇದರಿಂದ ಹೆಚ್ಚು ಆದಾಯ ನೀಡುವ ಸಂಸ್ಥೆಗಳಿಗೆ ಹೆಚ್ಚು ಪಾಲು ನೀಡುವ ಒಪ್ಪಂದಕ್ಕೆ ಕುತ್ತು ಬೀಳಲಿದೆ. ಇದನ್ನು ಬಿಸಿಸಿಐ ಮೊದಲೂ ವಿರೋಧಿಸಿತ್ತು. ಅಲ್ಲದೆ ಈಗ ನಡೆಯುತ್ತಿರುವ ಸಭೆಯಲ್ಲಿ ಅದನ್ನು ಅಂಗೀಕರಿಸಿದ್ದೇ ಆದಲ್ಲಿ, ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಲ್ಗೊಳ್ಳುವುದಿಲ್ಲ ಬೆದರಿಕೆ ಹಾಕಿದೆ. ಹೀಗಾಗಿ ಈ ಬಾರಿಯ ಐಸಿಸಿ ಸಭೆ ಪ್ರಾಮುಖ್ಯದ್ದಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ