ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಇದೀಗ ಯಶಸ್ಸಿನ ಕಾಲ. ಎಲ್ಲಿ ಹೋದರೂ ಅವರನ್ನು ಮೇಲಕ್ಕೆತ್ತುವವರೇ. ಅಂತಿಪ್ಪ ಕೊಹ್ಲಿಗೆ ಈಗ ವಿಸ್ಡಮ್ ಕ್ರಿಕೆಟರ್ಸ್ ಆಲ್ ಮನಾಕ್ ನ ಕವರ್ ಸ್ಟಾರ್ ಗೌರವ ಲಭಿಸಿದೆ.
ಅಂದರೆ ವಿಸ್ಡಮ್ ಮ್ಯಾಗಜೀನ್ ನ ಮುಖಪುಟ ತಾರೆಯಾಗುವ ಗೌರವ ಲಭಿಸಿದೆ. ಕೊಹ್ಲಿ ಈ ಗೌರವಕ್ಕೆ ಪಾತ್ರರಾದ ನಾಲ್ಕನೇ ಏಷ್ಯಾ ಮೂಲದ ಕ್ರಿಕೆಟಿಗ ಎನ್ನುವುದು ಇನ್ನೊಂದು ವಿಶೇಷ. 2014 ರಲ್ಲಿ ಸಚಿನ್ ತೆಂಡುಲ್ಕರ್ ಈ ಗೌರವಕ್ಕೆ ಪಾತ್ರರಾಗಿದ್ದರು.
ಕೊಹ್ಲಿ ಸಮಕಾಲೀನ ಆಟಗಾರರಲ್ಲಿ ಬೆಸ್ಟ್ ಎನ್ನುವ ಕಾರಣಕ್ಕೆ ಅವರಿಗೆ ಈ ಗೌರವ ನೀಡಲಾಗಿದೆ ಎಂದು ವಿಸ್ಡಮ್ ಸಂಪಾದಕ ಲಾರೆನ್ಸ್ ಬೂತ್ ಹೇಳಿದ್ದಾರೆ. ಆದರೆ ವಿಸ್ಡಮ್ ಫೈವ್ ಕ್ರಿಕೆಟರ್ ಆಫ್ ದಿ ಇಯರ್ ಪಟ್ಟಿಯಲ್ಲಿ ಇನ್ನೂ ಕೊಹ್ಲಿಗೆ ಸ್ಥಾನ ಸಿಕ್ಕಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ