ಕೋಲ್ಕೊತ್ತಾ: ಭಾರತ ವಿರುದ್ಧ ಶ್ರೀಲಂಕಾ ಗೆಲುವಿನ ಸ್ಥಿತಿಯಲ್ಲಿತ್ತು. ಆದರೆ ಕೊನೆಯ ಹಂತದಲ್ಲಿ ಸೋಲುವ ಹಂತಕ್ಕೆ ಬಂದಿದ್ದು ನಿಜಕ್ಕೂ ಆ ತಂಡಕ್ಕೆ ಆಘಾತ ನೀಡಿತ್ತು.
ಈ ಆಘಾತದ ನಡುವೆ ಸೋಲು ತಪ್ಪಿಸಿಕೊಳ್ಳಲು ಶ್ರೀಲಂಕಾ ನಾಯಕ ದಿನೇಶ್ ಚಂಡಿಮಾಲ್ ನಾನಾ ನಾಟಕ ಮಾಡಿದರು. ಡಿಆರ್ ಎಸ್, ಫೇಕ್ ಫೀಲ್ಡಿಂಗ್ ನಂತರ ಲಂಕಾ ನಾಯಕನ ಈ ನಾಟಕ ಮತ್ತೊಮ್ಮೆ ಆ ತಂಡದ ಬಣ್ಣ ಬಯಲು ಮಾಡಿತು.
ಗೆಲುವಿಗೆ 230 ರನ್ ಗಳ ಗುರಿ ಬೆನ್ನತ್ತಿದ್ದ ಲಂಕಾ ಭುವನೇಶ್ವರ್ ಕುಮಾರ್ (4 ವಿಕೆಟ್), ಮೊಹಮ್ಮದ್ ಶಮಿ (2) ಮತ್ತು ಉಮೇಶ್ ಯಾದವ್ ದಾಳಿಗೆ ತತ್ತರಿಸಿ ಅಂತಿಮ ಕ್ಷಣದಲ್ಲಿ ಸೋಲಿನಂಚಿಗೆ ಸಿಲುಕಿತ್ತು. 75 ರನ್ ಗೆ 7ವಿಕೆಟ್ ಕಳೆದುಕೊಂಡಿದ್ದ ಲಂಕಾಗೆ ಸೋಲಿನ ಭೀತಿ ಆವರಿಸಿತ್ತು. ಭಾರತದ ಬಳಿ ಇನ್ನೂ ಓವರ್ ಇತ್ತು.
ಆದರೆ ಪೆವಿಲಿಯನ್ ನಿಂದ ಸನ್ನೆ ಮಾಡಿದ ಲಂಕಾ ನಾಯಕ ಚಂಡಿಮಾಲ್ ಮಂದ ಬೆಳಕಿದೆ. ಬಾಲ್ ಕಾಣುತ್ತಿಲ್ಲ ಎಂದು ಅಂಪಾಯರ್ ಗೆ ಸನ್ನೆ ಮಾಡಿದರು. ಅದಕ್ಕೆ ಅಂಪಾಯರ್ ಕಿವಿಗೊಡದಿದ್ದಾಗ ಬ್ಯಾಟ್ಸ್ ಮನ್ ಗೆ ನೆರವಾಗುವ ನೆಪದಲ್ಲಿ ಮೈದಾನಕ್ಕೆ ಫಿಸಿಯೋ ಕಳುಹಿಸುವ ಯತ್ನ ಮಾಡಿದರು. ಆದರೆ ಅವರನ್ನು ಹೊರಗೆ ಕಳುಹಿಸಲಾಯಿತು.
ಕ್ರೀಸ್ ನಲ್ಲಿದ್ದ ಶಣಕಾ, ಹೆರಾತ್ ಅಂಪಾಯರ್ ಬಳಿ ಮಂದ ಬೆಳಕಿನ ಬಗ್ಗೆ ದೂರಿದ ನಂತರ ಅಂಪಾಯರ್ ಗಳು ಪರಸ್ಪರ ಚರ್ಚಿಸಿ ಪಂದ್ಯ ನಿಲ್ಲಿಸಿದರು. ಇದರೊಂದಿಗೆ ಅದ್ಭುತವಾಗಿ ಕೊನೆಗೊಳ್ಳಬೇಕಿದ್ದ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ