Daily Horoscope
✕

ಟೀಂ ಇಂಡಿಯಾಗೆ ಕೆಎಲ್ ರಾಹುಲ್ ನಾಯಕತ್ವ: ಅನಿಲ್ ಕುಂಬ್ಳೆ ಬಳಿಕ ಕನ್ನಡಿಗನಿಗೊಲಿದ ಅದೃಷ್ಟ

Webdunia
ಸೋಮವಾರ, 3 ಜನವರಿ 2022 (16:22 IST)
ಜೊಹಾನ್ಸ್ ಬರ್ಗ್: ಭಾರತ ಮತ್ತು ದ.ಆಫ್ರಿಕಾ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಕರ್ನಾಟಕ ಮೂಲದ ಕೆಎಲ್ ರಾಹುಲ್ ಟೀಂ ಇಂಡಿಯಾ ನಾಯಕರಾಗಿದ್ದಾರೆ. ಈ ಮೂಲಕ ರಾಹುಲ್ ದಾಖಲೆ ಮಾಡಿದ್ದಾರೆ.

ಇತ್ತೀಚೆಗಷ್ಟೇ ಟೀಂ ಇಂಡಿಯಾ-ದ. ಆಫ್ರಿಕಾ ಏಕದಿನ ಸರಣಿಗೆ ನಾಯಕನಾಗಿ ಆಯ್ಕೆಯಾಗಿದ್ದ ರಾಹುಲ್ ಗೆ ಇದೀಗ ಅನಿರೀಕ್ಷಿತವಾಗಿ ಟೆಸ್ಟ್ ತಂಡದ ನಾಯಕತ್ವ ವಹಿಸುವ ಅವಕಾಶ ಬಂದಿದೆ. ಈ ಮೂಲಕ ಸೀಮಿತ ಓವರ್ ಗಳಲ್ಲಿ ತಂಡದ ನಾಯಕರಾಗುವ ಮೊದಲೇ ಟೆಸ್ಟ್ ತಂಡಕ್ಕೆ ನಾಯಕರಾದ ಎರಡನೇ ಭಾರತೀಯ ನಾಯಕ ಎಂಬ ದಾಖಲೆ ಮಾಡಿದರು.

ಅಲ್ಲದೆ, ಕರ್ನಾಟಕ ಮೂಲದವರು ಟೀಂ ಇಂಡಿಯಾವನ್ನು ಮುನ್ನಡೆಸುತ್ತಿರುವುದು ಇದೇ ಮೊದಲಲ್ಲ. ಆದರೆ ಅನಿಲ್ ಕುಂಬ್ಳೆ ಬಳಿಕ ಟೀಂ ಇಂಡಿಯಾದ ನಾಯಕರಾದ ಹೆಮ್ಮೆ ರಾಹುಲ್ ಅವರದ್ದು. ಭಾರತೀಯ ತಂಡವನ್ನು ಮುನ್ನಡೆಸಬೇಕೆಂಬುದು ಯಾವುದೇ ಆಟಗಾರನ ಕನಸು. ಇದು ನನಗೆ ನಿಜಕ್ಕೂ ಗೌರವ ಮತ್ತು ಸವಾಲಿನ ಕೆಲಸ ಎಂದು ರಾಹುಲ್ ಹೇಳಿದ್ದಾರೆ. ಇನ್ನು ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ನಾಯಕರಾಗಿರುವ ರಾಹುಲ್ ಗೆ ನೆಟ್ಟಿಗರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

ಭಾರತ ಮತ್ತು ನ್ಯೂಜಿಲೆಂಡ್ ಏಕದಿನ ಸರಣಿ 2026: ಪಂದ್ಯಗಳ ವೇಳಾಪಟ್ಟಿ ಮತ್ತು ನೇರಪ್ರಸಾರ ವಿವರ

IND vs NZ: ನ್ಯೂಜಿಲೆಂಡ್ ಎದುರು 4ನೇ ಟಿ20 ಪಂದ್ಯದಲ್ಲಿ 87 ರನ್‌ಗಳ ಸೋಲುಂಡ ಟೀಮ್ ಇಂಡಿಯಾ

ಸ್ಮೃತಿ ಮಂಧಾನ, ಹರ್ಮನ್ ಪ್ರೀತ್ ಕೋಲ್ಡ್ ವಾರ್ ಇನ್ನೂ ನಿಂತಿಲ್ವಾ: ಮೈದಾನದಲ್ಲಿ ಇಬ್ಬರ ವರ್ತನೆಗೆ ಫ್ಯಾನ್ಸ್ ಶಾಕ್ Video

ತಣ್ಣೀರು ಕುಡೀಬೇಡಪ್ಪಾ… ವೈಭವ್ ಸೂರ್ಯವಂಶಿಗೆ ಮೈದಾನದಲ್ಲಿದ್ದ ಯುವತಿಯಿಂದ ಅಕ್ಕರೆಯ ಸಲಹೆ Video

IND vs NZ: ನ್ಯೂಜಿಲೆಂಡ್ ಬೌಲರ್ ಗಳ ಅಕ್ಷರಶಃ ಮರ್ಡರ್ ಮಾಡಿದ ಅಭಿಷೇಕ್, ವೈಭವ್: ಟೀಂ ಇಂಡಿಯಾ ಸ್ಕೋರ್ ಕಾರ್ಡ್ ನೋಡಿ ಶಾಕ್ Video

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮುಂದಿನ ಸುದ್ದಿ
Show comments