Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮುಂಬೈ: ನಾಯಕತ್ವ ವಿಚಾರವಾಗಿ ಬಿಸಿಸಿಐ ವಿರುದ್ಧ ಬಹಿರಂಗ ಹೇಳಿಕೆ ಕೊಟ್ಟಿರುವ ವಿರಾಟ್ ಕೊಹ್ಲಿ ವಿರುದ್ಧ ಮಾಜಿ ನಾಯಕ ಕಪಿಲ್ ದೇವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆಫ್ರಿಕಾ ಪ್ರವಾಸಕ್ಕೆ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಕೊಹ್ಲಿ, ನನ್ನಲ್ಲಿ ನಾಯಕತ್ವ ತ್ಯಜಿಸಬಾರದು ಎಂದು ಯಾರೂ ಹೇಳಿರಲಿಲ್ಲ. ಒಂದೂವರೆ ಗಂಟೆ ಮೊದಲಷ್ಟೇ ನನಗೆ ಏಕದಿನ ನಾಯಕತ್ವದಿಂದ ಕೆಳಗಿಳಿಯಬೇಕು ಎಂದರು ಎಂದಿದ್ದರು. ಇದಕ್ಕೂ ಮೊದಲು ಬಿಸಿಸಿಐ ಅಧ್ಯಕ್ಷ ಗಂಗೂಲಿ ನಾಯಕತ್ವ ಬಿಡದಂತೆ ಕೊಹ್ಲಿಗೆ ಮನವಿ ಮಾಡಿದ್ದೆವು ಎಂದಿದ್ದರು. ಹೀಗಾಗಿ ಕೊಹ್ಲಿ ಹೇಳಿಕೆ ಬಿಸಿಸಿಐಗೆ ಮುಜುಗರ ತಂದಿತ್ತು.
ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಕಪಿಲ್ ದೇವ್, ಮಹತ್ವದ ಸರಣಿಗೆ ಮುನ್ನ ಕೊಹ್ಲಿ ಈ ರೀತಿಯ ಹೇಳಿಕೆ ನೀಡಬಾರದಿತ್ತು. ಇದರಿಂದ ಆಟಗಾರರ ಗಮನ ಬೇರೆಡೆ ಸೆಳೆಯುತ್ತದೆ. ಪ್ರತಿಷ್ಠೆ ಬಿಟ್ಟು ದೇಶ ಮೊದಲು ಎಂಬ ಮನಸ್ಥಿತಿ ರೂಢಿಸಿಕೊಳ್ಳಬೇಕು ಎಂದು ಬುದ್ಧಿವಾದ ಹೇಳಿದ್ದಾರೆ.