Publish Date: Sun, 14 Nov 2021 (09:40 IST)
Updated Date: Sun, 14 Nov 2021 (09:41 IST)
ದುಬೈ: ಸಾಮಾನ್ಯವಾಗಿ ಐಸಿಸಿ ಟೂರ್ನಿಗಳಲ್ಲಿ ಮುಗ್ಗರಿಸುತ್ತಿದ್ದ ನ್ಯೂಜಿಲೆಂಡ್ ಕಳೆದ ಆರು ವರ್ಷಗಳಿಂದ ಅದ್ಭುತ ಪ್ರದರ್ಶನ ನೀಡುತ್ತಿದೆ. ಇದಕ್ಕೆಲ್ಲಾ ಕಾರಣ ಕೇನ್ ವಿಲಿಯಮ್ಸನ್ ನಾಯಕತ್ವ.
ಕಳೆದ ಆರು ವರ್ಷಗಳಲ್ಲಿ ಕೇನ್ ವಿಲಿಯಮ್ಸನ್ ನಾಯಕತ್ವದಲ್ಲಿ ನ್ಯೂಜಿಲೆಂಡ್ ಐದು ಬಾರಿ ಐಸಿಸಿ ಟೂರ್ನಮೆಂಟ್ ನಲ್ಲಿ ಸ್ಪರ್ಧಿಸಿದ್ದು, ನಾಲ್ಕು ಬಾರಿ ಫೈನಲ್ ತಲುಪಿದ ಸಾಧನೆ ಮಾಡಿದೆ.
ದುರಾದೃಷ್ಟವಶಾತ್ ಕಳೆದ ಏಕದಿನ ವಿಶ್ವಕಪ್ ಫೈನಲ್ ನಲ್ಲಿ ಸೋತಿರಬಹುದು. ಆ ಸೋಲಿಗೆ ಈ ಟಿ20 ವಿಶ್ವಕಪ್ ನಲ್ಲಿ ಸೇಡು ತೀರಿಸಿಕೊಂಡಿದ್ದಾರೆ. ಇದೇ ವರ್ಷ ಎರಡು ಬಾರಿ ಐಸಿಸಿ ಫೈನಲ್ ತಲುಪಿದ್ದು, ಆ ಪೈಕಿ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಗೆಲುವು ಕಂಡಿತ್ತು. ಇದೀಗ ಟಿ20 ವಿಶ್ವಕಪ್ ನಲ್ಲೂ ಗೆಲುವು ಪುನರಾವರ್ತನೆಯಾಗುತ್ತದಾ ಕಾದು ನೋಡಬೇಕು.