Publish Date: Thu, 15 Sep 2022 (08:50 IST)
Updated Date: Thu, 15 Sep 2022 (09:11 IST)
ಮುಂಬೈ: ಟಿ20 ವಿಶ್ವಕಪ್ ಗೆ ಆಯ್ಕೆಯಾಗಿರುವ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಅಭ್ಯಾಸ ಆರಂಭಿಸಿದ್ದಾರೆ.
ಬುಮ್ರಾ ಗಾಯಗೊಂಡಿದ್ದರಿಂದ ವಿಶ್ರಾಂತಿಯಲ್ಲಿದ್ದರು. ಮೊನ್ನೆಯಷ್ಟೇ ವಿಶ್ವಕಪ್ ಗೆ ಟೀಂ ಇಂಡಿಯಾ ಪ್ರಕಟವಾಗಿದ್ದು, ಬುಮ್ರಾ ಆಯ್ಕೆಯಾಗಿದ್ದರು.
ಇದೀಗ ಬುಮ್ರಾ ಅಭ್ಯಾಸ ಆರಂಭಿಸಿರುವ ವಿಡಿಯೋ ಪ್ರಕಟಿಸಿದ್ದು, ಫ್ಯಾನ್ಸ್ ಖುಷಿಯಾಗಿದ್ದಾರೆ. ಬುಮ್ರಾ ಇಲ್ಲದೇ ಟೀಂ ಇಂಡಿಯಾ ವೇಗದ ಬೌಲಿಂಗ್ ದುರ್ಬಲವಾಗಿತ್ತು. ಇದೀಗ ಬುಮ್ರಾ ಪುನರಾಗಮನವಾಗುತ್ತಿರುವುದು ತಂಡಕ್ಕೆ ಬಲ ಒದಗಿಸಲಿದೆ.